ದೆಹಲಿ: ಜನೌಷಧಿ ದಿವಸ ಅಂಗವಾಗಿ ಮಾನ್ಯ ಪ್ರಧಾನಿ ನರೇಂದ್ರಮೋದಿ ಅವರು ವಿಡಿಯೋ ಸಂವಾದದ ಮೂಲಕ ದೇಶಾದ್ಯಂತ ಫಲಾನುಭವಿಗಳ ಜತೆ ಸಂವಾದ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಜನರಿಕ್ ಮೆಡಿಸಿನ್ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದು, ಈ ಮಳಿಗೆಗಳಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಔಷಧ ಸಿಗುತ್ತಿದೆ. ಈ ಔಷಧ ಮಳಿಗೆಯ ಸದ್ಬಳಕೆಯಲ್ಲಿನ ಜನೋತ್ಸಾಹ ಕಂಡು ಪ್ರಧಾನಿ ಮೋದಿ ಸಂತಸ ಹಂಚಿಕೊಂಡರು.
ಇತ್ತ ಬೆಂಗಳೂರಿನಲ್ಲೂ ಮೋದಿ ಜೊತೆಗಿನ ಸಂವಾದ ಸಂಬಂಧದ ಕಾರ್ಯಕ್ರಮ ಗಮನಸೆಳೆಯಿತು.
ಕೋರಮಂಗಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಭಾನುವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಬಳಿಕ ನೂತನ ಜನೌಷಧ ಮಳಿಗೆಯನ್ನು ಲೋಕಾರ್ಪಣೆ ಮಾಡಲಾಯಿತು.