ಮುಂಬೈ: ಇದೀಗ ಮತ್ತೆ ಕೊರೋನಾ ಗುಮ್ಮ ದೇಶದ ಜನರನ್ನು ಕಾಡತೊಡಗಿದೆ. ಮಹಾರಾಷ್ಟ್ರದ ಹಲವೆಡೆ ಕೋವಿಡ್ ಹೊಸ ರೂಪಾಂತರಿ KP.2 ವೈರಾಣು ಹಾವಳಿ ಪತ್ತೆಯಾಗಿದೆ. ಸುಮಾರು 92 ಪ್ರಕರಣಗಳು ದಾಖಲಾಗಿವೆ ಎಂದು ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಪುಣೆಯಲ್ಲಿ 51 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಥಾಣೆಯಲ್ಲಿ ಸುಮಾರು 20 ಪ್ರಕರಣಗಳು ದಾಖಲಾಗಿವೆ. ಅಮರಾವತಿಯಲ್ಲಿ 7, ಛತ್ರಪತಿ ಸಾಂಬಾಜಿ ನಗರದಲ್ಲೂ 7 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೊಲ್ಲಾಪುರದಲ್ಲೂ ಇಬ್ಬರು ಸೋಂಕಿಗೊಳಗಾಗಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ನಡುವೆ ಕೊರೋನಾ ಹೊಸ ರೂಪಾಂತರಿ ವೈರಾಣು ಸೋಂಕು ಹರಡದಂತೆ ಸರ್ಕಾರ ಕ್ರಮಕ್ಕೆ ಸೂಚಿಸಿದೆ. ಇತ್ತ ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







































































