ದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಜೇರಿರುವ ಕಾಂಗ್ರೆಸ್ ಪಾಳಯ ಇದೀಗ ನಾಯಕರ ಮಂತ್ರಿಗಿರಿ ರೇಸ್‌ಗೆ ಸಾಕ್ಷಿಯಾಗಿದೆ. ಸಿಎಂ, ಡಿಸಿಎಂ ಹಾಗೂ 8 ಮಂದಿ ಹಿರಿಯ ಶಾಸಕರಷ್ಟೇ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು ಇದೀಗ ಸಂಪುಟ ವಿಸ್ತರಣೆ ಸಂಬಂದ ವಿದ್ಯಮಾನಗಳು ಗರಿಗೆದರಿವೆ.
ಸಂಭಾವ್ಯ ಮಂತ್ರಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರ ಜೊತೆ ಹಲವು ಸುತ್ತುಗಳ ಮಾತುಕತೆ ನಡರಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆ ಸಭೆ ನಡೆಸಿದ ಈ ನಾಯಕರು ಸಂಭಾವ್ಯ ಸಚಿವರ ಪಟ್ಟಿಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಅಂಕಿತ ಹಾಕುವುದನ್ನು ಎದುರು ನೋಡುತ್ತಿದ್ದಾರೆ.
ಈ ನಡುವೆ ಖರ್ಗೆಯವರು ಅಂಕಿತ ಹಾಕಿದರೆ ಒಂದೆರಡು ದಿನಗಳಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.
ಮಲ್ಲಿಕಾರ್ಜುನ ಖರ್ಗೆ ಬಳಿ ಇರುವ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ:
- ಹೆಚ್.ಕೆ.ಪಾಟೀಲ್
- ಕೃಷ್ಣಭೈರೇಗೌಡ
- ಚಲುವರಾಯಸ್ವಾಮಿ
- ಪಿರಿಯಾಪಟ್ಟಣ ವೆಂಕಟೇಶ್ಡಾ
- ಹೆಚ್.ಸಿ.ಮಹದೇವಪ್ಪ
- ಈಶ್ವರ ಖಂಡ್ರೆ
- ಕೆ.ಎನ್.ರಾಜಣ್ಣ
- ದಿನೇಶ್ ಗುಂಡೂರಾವ್
- ಶರಣಬಸಪ್ಪ ದರ್ಶನಾಪುರ
- ಶಿವಾನಂದ ಪಾಟೀಲ್
- ಆರ್.ಬಿ.ತಿಮ್ಮಾಪುರ
- ಎಸ್.ಎಸ್.ಮಲ್ಲಿಕಾರ್ಜುನ,
- ಶಿವರಾಜ ತಂಗಡಗಿ
- ಡಾ.ಶರಣ ಪ್ರಕಾಶ್ ಪಾಟೀಲ್
- ಮಂಕಾಳು ವೈದ್ಯ,
- ಲಕ್ಷ್ಮೀ ಹೆಬ್ಬಾಳ್ಕರ್
- ರಹೀಂ ಖಾನ್
- ಡಿ.ಸುಧಾಕರ್
- ಸಂತೋಷ್ ಲಾಡ್
- ಬೋಸರಾಜು
- ಬಿ.ಎಸ್.ಸುರೇಶ್
- ಮಧು ಬಂಗಾರಪ್ಪ
- ಎಂ.ಸಿ.ಸುಧಾಕರ್
- ಬಿ.ನಾಗೇಂದ್ರ
ಇದೇ ವೇಳೆ ಹಿರಿಯ ನಾಯಕರಾದ ಆರ್ ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್, ಶರಣ ಪ್ರಕಾಶ್ ಪಾಟೀಲ್, ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ನೀಡಬೇಕೆ ಬೇಡವೇ ಎಂಬ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ಹಂತದಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.