ನಮ್ಮ ದೇಶದಲ್ಲಿ ಜಾತಿಯ ಕಾರಣಕ್ಕೆ, ಆರ್ಥಿಕ ಕಾರಣಕ್ಕೆ ಮೀಸಲಾತಿ ನೀಡಲು ಅವಕಾಶವಿದೆ. ಮತ ಆಧಾರಿತವಾಗಿ ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ಟಿವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಸರ್ಕಾರದ ಕಾರ್ಯವೈಖರಿ ಬಗ್ಗೆ ಕಟು ಟೀಕೆ ಮಾಡಿದರು. ಮುಸ್ಲಿಮರಿಗೆ ಕಾಮಗಾರಿ ಗುತ್ತಿಗೆಯಲ್ಲೂ ಮೀಸಲಾತಿ ಕಲ್ಪಿಸಲು ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಖಂಡಿಸಿರುವ ಸಿ.ಟಿ.ರವಿ, ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಖಡಾಖಂಡಿತವಾಗಿ ಖಂಡಿಸಿದ್ದರು ಎಂದು ನೆನಪಿಸಿದ್ದಾರೆ.
ಮತ ಆಧಾರಿತ ಮೀಸಲಾತಿ ಅಸಂವಿಧಾನಿಕವಾದದ್ದು, ಸಂವಿಧಾನಕ್ಕೆ ವಿರುದ್ಧವಾದುದು. ಕಾಂಗ್ರೆಸ್ ಸಂವಿಧಾನದ ಮೇಲೆ ಷರಿಯಾ ಕಾನೂನು ಹೇರಲು ಹೊರಟಿದೆ ಎಂದು ಸಿ.ಟಿ.ರವಿ ಅವರು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ನಮ್ಮ ದೇಶದಲ್ಲಿ ಜಾತಿಯ ಕಾರಣಕ್ಕೆ, ಆರ್ಥಿಕ ಕಾರಣಕ್ಕೆ ಮೀಸಲಾತಿ ನೀಡಲು ಅವಕಾಶವಿದೆ. ಮತ ಆಧಾರಿತವಾಗಿ ಮೀಸಲಾತಿ ನೀಡಲು ಅವಕಾಶವಿಲ್ಲ. ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಖಡಾಖಂಡಿತವಾಗಿ ಖಂಡಿಸಿದ್ದರು.
ಮತ ಆಧಾರಿತ ಮೀಸಲಾತಿ ಅಸಂವಿಧಾನಿಕವಾದದ್ದು, ಸಂವಿಧಾನಕ್ಕೆ ವಿರುದ್ಧವಾದುದು.… pic.twitter.com/Smp9JZdqGA
— BJP Karnataka (@BJP4Karnataka) November 12, 2024