ಮಂಗಳೂರು: ಸುಳ್ಯ ಸಮೀಪ ಪಾಣತ್ತೂರು ಬಳಿ ಮದುವೆ ದಿಬ್ಬಣದ ಬಸ್ ಅಪಘಾತಕ್ಕೀಡಾಗಿದೆ. ಮದುವೆಗೆ ತೆರಳಿದವರು ಮಾರ್ಗ ಮಧ್ಯೆ ಭೀಕರತೆಯ ಸುಳಿಗೆ ಸಿಲುಕಿ ಮಸಣ ಸೇರುವಂತಾಯಿತು.
ಪುತ್ತೂರು ಕಡೆಯಿಂದ ಕೇರಳದ ಗಡಿಭಾಗಕ್ಕೆ ಹೊಂದಿಕೊಂಡಿರುವ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಪಲ್ಟಿಯಾಗಿದೆ.
ವಧುವಿನ ಊರಾದ ಈಶ್ವರ ಮಂಗಲದಿಂದ ದಿಬ್ಬಣ ತೆರಳುತ್ತಿದ್ದ ಖಾಸಗಿ ಬಸ್ ಪೆರಿಯಾರಂ ಎಂಬಲ್ಲಿ ಇಳಿಜಾರಿನಲ್ಲಿ ಮನೆಯೊಂದರ ಮೇಲೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಈ ಅಪಘಾತದಲ್ಲಿ ಕೆಲವರು ಸ್ಥಳದಲ್ಲೇ ಅಸುನೀಗಿದರೆ, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಒಂದು ಮೂಲದ ಪ್ರಕಾರ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ, ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ ಮತ್ತು ಜಯಲಕ್ಷ್ಮಿ ಎಂಬವರ ಗರುತು ಪತ್ತೆಯಾಗಿದೆ ಎಂದು ಹೆಳಲಾಗುತ್ತಿದೆ.