ಬೆಂಗಳೂರು: ರಾಜ್ಯಬಿಜೆಪಿ ಇದೀಗ ನಾಯಕರ ಮಕ್ಕಳ ಗುದ್ದಾಟ ಕ್ಕೆ ಸಾಕ್ಷಿಯಾಗುತ್ತಿದೆ. ಕುಟುಂಬ ರಾಜಕಾರಣ ಬಗ್ಗೆ ಕಾಂಗ್ರೆಸ್ ಜೆಡಿಎಸ್ ಪಕ್ಷದತ್ತ ಬೆರಳು ತೋರಿಸುತ್ತಿರುವ ಬಿಜೆಪಿ ನಾಯಕರಿಗೆ ಈ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಸಾಕ್ಷಿಯಾಗುತ್ತಿದೆ.
ಬಿಜೆಪಿ ಹಿರಿಯ ನಾಯಕ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಅವರು ಪಕ್ಷದ ನಾಯಕರೊಬ್ಬರ ಪುತ್ರನ ವಿರುದ್ದ ಗುಡುಗಿರುವ ವೀಡಿಯೋ ತುಣುಕು ಇದೀಗ ರಾಜ್ಯದ ಕಮಲ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಅರುಣ್ ಸೋಮಣ್ಣ ಅವರು ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ದ ನಡೆಸಿರುವ ವಾಗ್ದಾಳಿಯ ವೀಡಿಯೋ ಅದು ಎನ್ನಲಾಗಿದೆ.
ಕೆಲವು ದಿನಗಳಿಂದ ಸಚಿವ ವಿ.ಸೋಮಣ್ಣ ಹಾಗೂ ಪಕ್ಷದ ನಾಯಕರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿರುವ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಈ ಕಾರಣದಿಂದಾಗಿಯೇ ವಿ.ಸೋಮಣ್ಣ ಅವರು ಬಿಜೆಪಿ ತೊರೆಯುವ ಸಾಧ್ಯತೆಗಳಿವೆ ಎಂಬ ಮಾತುಗಳು ಪಕ್ಷದ ಕಚೇರಿಯ ಮೊಗಸಾಲೆಯಲ್ಲೇ ಪ್ರತಿಧ್ವನಿಸುತ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇತ್ತೀಚೆಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದ ಪಕ್ಷದ ಕಾರ್ಯಕ್ರಮಗಳಿಗೆ ಸೋಮಣ್ಣ ಗೈರಾಗಿರುವ ಸಂಗತಿ ಈ ವಿದ್ಯಮಾನಗಳಿಗೆ ಪುಷ್ಟಿ ನೀಡಿದೆ.
ಈ ನಡುವೆ, ವಿಜಯನಗರ ಬಳಿ ನಡೆದಿದೆ ಎನ್ನಲಾದ ಕಾರ್ಯಕ್ರಮದಲ್ಲಿ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಆವೇಶದಿಂದ ಮಾತನಾಡಿದ್ದಾರೆಂಬ ವೀಡಿಯೋ ಬಿಜೆಪಿ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಅರುಣ್ ಸೋಮಣ್ಣ ಅವರು ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವೀಡಿಯೋ ಇದಾಗಿದೆ ಎನ್ನಲಾಗಿದೆ. ವಿ.ಸೋಮಣ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರೇ ಸಂಧಾನದ ಅಖಾಡಕ್ಕೆ ಧುಮುಕಿದ್ದಾರೆ. ಅದೇ ಹೊತ್ತಲ್ಲೇ ಸೋಮಣ್ಣ ಪುತ್ರನ ಆವೇಶದ ವೀಡಿಯೋ ವೈರಲ್ ಆಗಿರುವ ಬೆಳವಣಿಗೆ ಕಮಲ ನಾಯಕರಿಗೆ ತಲೆನೋವಾಗಿ ಪರಿಣನಿಸಿದೆ.
KARNATAKA BREAKING:#BJPDynastyPolitics: Two BJP leaders Ugly Dynasty Politics came to the streets ahead of polls
V Somanna Son Arun attacks BSY son Vijayendra for his Misbehaviour over phone Conversation.
Attached the Video Clip. listen#KarnatakaElection2023#ArunVSVijendra pic.twitter.com/RbED9wR3Fj
— Gururaj Anjan (@Anjan94150697) March 14, 2023