ದೆಹಲಿ: ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುನ್ನುಡಿ ಬರೆದಿದೆ. ಅದರಂತೆ, ಉತ್ತರಾಖಂಡ್‌ನ ಮುಖ್ಯಮಂತ್ರಿಯನ್ನು ಬದಲಾಯಿಸಲು ಬಿಜೆಪಿ ವರಿಷ್ಠರು ಸೂಚಿಸಿದ್ದು, ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.
ನಾಯಕತ್ವದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವುದಕ್ಕಾಗಿ ರಾಜೀನಾಮೆ ನೀಡಿರುವುದಾಗಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ಉತ್ತರಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಅಷ್ಟರಲ್ಲೇ ನಾಯಕತ್ವ ವದಲಾವಣೆಗೆ ಶಾಸಕರು ಒತ್ತಡ ಹೇರಿದ್ದಾರೆ. ಅದಾಗಲೇ ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ನಾಯಕತ್ವ ಬದಲಾಯಿಸುವ ಅಗತ್ಯದ ಬಗ್ಗೆ ಪರಾಮರ್ಷಿಸಿರುವ ಪಕ್ಷದ ಹೈಕಮಾಂಡ್ ಆರಂಭಿಕ ಹಂತದಲ್ಲಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರಿಂದ ರಾಜೀನಾಮೆ ಕೊಡಿಸಿದೆ.
2017ರಲ್ಲಿ ನಡೆದ ಉತ್ತರಖಂಡ್ ವಿಧಾನಸಭಾ ಚುನಾವಣೆಯಲ್ಲಿ 69 ಸ್ಥಾನಗಳ ಪೈಕಿ 57 ಬಿಜೆಪಿ ಸ್ಥಾನಗಳನ್ನು ಗೆದ್ದಿತ್ತು. ಭಾರೀ ಬಹುಮತದ ಸರ್ಕಾರವಿದ್ದರೂ ಹೈಕಮಾಂಡ್ ಇದೀಗ ನಾಯಕತ್ವ ಬದಲಾವಣೆಯ ನಿಷ್ಟುರ ಕೈಗೊಂಡಿದ್ದು ಈ ಬೆಳವಣಿಗೆಯು ಬಿಜೆಪಿ ಸರ್ಕಾರವಿರುವ ಇತರೇ ರಾಜ್ಯಗಳ ಮುಖ್ಯಮಂತ್ರಿಗಳಲ್ಲೂ ನಡುಕ ಹುಟ್ಟಿಸಿದೆ.