ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಸೋಂಕು ತಡೆಯಲು ಕಠಿಣ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಇದರಿಂದಾಗಿ ಸೋಂಕಿತರ ಚಿಕಿತ್ಸೆಗೆ ಅನಾನುಕೂಲವಾಗಿದೆ. ಇಮತಹಾ ಸಂದರ್ಭದಲ್ಲಿ ಸಮಾಜಿಕ ಸಂಘಟನೆಗಳು ನೆರವಿಗೆ ಧಾವಿಸಿವೆ.ಇನ್ನೊಂದೆಡೆ ಬಿಜೆಪಿ ಕೈಗೊಂಡಿರುವ ಕಾರ್ಯಕ್ರಮ ಕೂಡಾ ನಾಡಿನ ಗಮನ ಸೆಳೆದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಪಕ್ಷದಿಂದ ಕೊರೋನಾ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಸೇನಾನಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ.
ಸಂಘ ಪರಿವಾರದ ವಿವಿಧ ಕ್ಷೇತ್ರಗಳಲ್ಲಿ ಒಂದಾಗಿರುವ ಸೇವಾ ಬಾರತಿ ವತಿಯಿಂದ ಕೋವಿಡ್ ಟೆಸ್ಟ್‌ನಿಂದ ಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವರೆಗೂ ಉಚಿತ ಕೆಲಸ ಸಾಗಿದೆ. ಅದೇ ಕಾರ್ಯವನ್ನು ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಪಕ್ಷವೂ ಕೈಗೊಂಡಿದೆ. ಕಾರ್ಯಕರ್ತರ ಸಮೂಹವು ಸ್ವಯಂಸೇವಕರಾಗಿ ಇದರಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಆಡಳಿತಾರೂಢ ಪಕ್ಷದ ಈ ಕಾರ್ಯವು ಸರ್ಕಾರದ ಕೆಲಸಕ್ಕಿಂತಲೂ ಚೆನ್ನಾಗಿದೆ ಎಂಬ ಶ್ಲಾಘನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಹಗರಣಗಳ ವ್ಯೂಹದಲ್ಲಿ ಸರ್ಕಾರ..
ಬೆಡ್ ಹಗರಣ, ಖಾಸಗಿ ಆಸ್ಪತ್ರೆಗಳಿಗೆ ಮಂಡಿಯೂರಿದ ಪರಿ, ಹೀಗೆ ಹಲವಾರು ಅಧ್ವಾನಗಳಿಗೆ ರಾಜ್ಯ ಸರ್ಕಾರದ ನಡೆ ಸಾಕ್ಷಿಯಾಗುತ್ತಿವೆ. ಇದರಿಂದಾಗಿ ಸರ್ಕಾರ ಹಾಗೂ ಬಿಜೆಪಿಗೆ ಕೆಟ್ಟ ಹೆಸರುಗಳು ಬರುತ್ತಿವೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಬಿಜೆಪಿ ಕಾರ್ಯಕರರು ಇದೀಗ ಬಿಜೆಪಿಯ ಈ ಕೋವಿಡ್ ಕೈಂಕರ್ಯದಲ್ಲಿ ಉತ್ಸಾಹದಿಂದ ಭಾಗಿದ್ದಾರೆ. ಸಿಎಂ ಬಿಎಸ್‌ವೈಗಿಂತ ನಳಿನ್ ಕುಮಾರ್ ನಮಗೀಗ ಹೆಚ್ಚು ಅಂತಿದ್ದಾರೆ ಈ ಕಾರ್ಯಕ್ರಮದಲ್ಲಿ ತೊಡಗಿರುವ ಸೇನಾನಿಗಳು.
ರಾಜ್ಯದಲ್ಲಿ ಬಿಜೆಪಿಯು 37 ಸಂಘಟನಾತ್ಮಕ ಜಿಲ್ಲೆಗಳನ್ನು ಗುರುತಿಸಿ ಸಂಘಟನೆಯ ಕೆಲಸಗಳನ್ನು ಮಾಡುತ್ತಿದೆ. ಈ ಜಿಲ್ಲೆಗಳಲ್ಲಿನ 250 ಸಹಾಯ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಸೇವಾ ಚಟುವಟಿಕೆಗಳ ವಿವರವನ್ನು ಬಿಜೆಪಿ ಪ್ರಕಟಿಸಿದೆ.
ರಾಜ್ಯದ 37 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ 250 ಸಹಾಯ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಸೇವಾ ಚಟುವಟಿಕೆಗಳ ವಿವರ.#KarnatakaFightsCorona #SevaHiSanghatan pic.twitter.com/HuLaMDEiHi
— BJP Karnataka (@BJP4Karnataka) May 8, 2021
ರಾಜ್ಯದ 37 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ 250 ಸಹಾಯ ಕೇಂದ್ರಗಳಲ್ಲಿ 13 ರೀತಿಯ ಸೇವೆಗಳ ಮುಖಾಂತರ ರಾಜ್ಯದ ಜನತೆಯ ಸೇವೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ ಎಂದು ಪಕ್ಷ ಹೇಳಿದೆ.
ರಾಜ್ಯದ 37 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ 250 ಸಹಾಯ ಕೇಂದ್ರಗಳಲ್ಲಿ 13 ರೀತಿಯ ಸೇವೆಗಳ ಮುಖಾಂತರ ರಾಜ್ಯದ ಜನತೆಯ ಸೇವೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ.#KarnatakaFightsCorona #SevaHiSanghatan pic.twitter.com/9mcHg3zOoF
— BJP Karnataka (@BJP4Karnataka) May 8, 2021