ಬೆಂಗಳೂರು: ರಾಜ್ಯ ರಾಜಜಾರಣದಲ್ಲೀಗ ಕುಟುಂಬ ರಾಜಕಾರಣದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಪಕ್ಷವು ನೆಹರೂ ಕುಟುಂಬದ ಹಿಡಿತದಲ್ಲಿರುವ ಬಗ್ಗೆ ಬಿಜೆಪಿ ದಶಕಗಳಿಂದಲೂ ಆರೋಪ ಮಾಡುತ್ತಿದೆ. ಈ ಆರೋಪ ಮಾಡುತ್ತಿದ್ದ ಬಿಜೆಪಿಗೆ ಇದೀಗ ಬಿಎಸ್‌ವೈ ಅವರ ಪುತ್ರ ವ್ಯಾಮೋಹದ ನಡೆ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದೆ.
ಪ್ರಸ್ತುತ ರಾಜ್ಯದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಸೂಪರ್ ಸಿಎಂ ಎಂಬಂತೆ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂಬುದು ಸಂಘನಿಷ್ಠ ಬಿಜೆಪಿ ಶಾಸಕರ ಆಕ್ರೋಶ. ಇದೀಗ ಬಿಜೆಪಿಯ ಹಿರಿಯರಲ್ಲೊಬ್ವರಾಗಿರುವ ಸಚಿವ ಈಶ್ವರಪ್ಪ ಮಾಡಿರುವ ಆರೋಪದ ನಂತರದ ಬೆಳವಣಿಗೆಯು ಹೈಕಮಾಂಡ್ ಪಾಲಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ವರೆಗೂ ನೆಹರೂ, ಇಂದಿರಾ, ರಾಜೀವ್, ಸೋನಿಯಾ, ರಾಹುಲ್.. ಹೀಗೆ ವಂಶಾಡಳಿತಕ್ಕೆ ಸಾಕ್ಷಿಯಾಗಿರುವ ಕಾಂಗ್ರೆಸ್ ಬಗ್ಗೆ ಬಿಜೆಪಿ ವ್ಯಂಗ್ಯವಾಡುತ್ತಿತ್ತು. ಇದೀಗ ಕಾಂಗ್ರೆಸ್ ಪಕ್ಷ ವಿಜಯೇಂದ್ರ ಹೆಸರನ್ನು ಮುಂದಿಟ್ಟು ಬಿಜೆಪಿಯತ್ತ ಪ್ರತ್ಯಸ್ತ್ರ ಪ್ರಯೋಗಿಸುತ್ತಿದೆ. ಅದರಲ್ಲೂ ಡಿಎನ್‌ಎ ಟೆಸ್ಟ್‌ವರೆಗೂ ತಿರುವು ಪಢದಿರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ.
ಏನಿದು ಡಿಎನ್‌ಎ ಸವಾಲ್?
ಕಾಂಗ್ರೆಸ್ ನಾಯಕರ ನಡುವಿನ ಬೆಳವಣಿಗೆಯತ್ತ ಬೊಟ್ಟು ಮಾಡಿರುವ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್‌ನ ಬೆಳವಣಿಗೆ ಬಗ್ಗೆ ವ್ಯಂಗ್ಯವಾಡಿತ್ತು. ‘ನಮ್ಮದು ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಲ್ಲ. ವಲಸೆ ನಾಯಕ ಸಿದ್ದರಾಮಯ್ಯ ಹಾಗೂ ಮಹಾನಾಯಕ ನಡುವೆ ಯುದ್ಧ ತಾರಕಕ್ಕೇರಿದೆ. ದಲಿತ ಶಾಸಕ ಅಖಂಡ ಅವರು ಪಕ್ಷದ ನೆರವು ಕೇಳಿದರೂ ಅವರ ವಿರುದ್ಧವೇ ನೋಟಿಸ್ ನೀಡುವ ಬೆದರಿಕೆ ಒಡ್ಡಿದಿರಿ. ಅಖಂಡಗೊಂದು ನ್ಯಾಯ, ಸೌಮ್ಯ ರೆಡ್ಡಿ, ಸಂಗಮೇಶ್ ಅವರಿಗೊಂದು ನ್ಯಾಯ’ ಎಂದು ಬಿಜೆಪಿ ಟ್ವೀಟ್ ಮಾಡಿ ಕೈ ನಾಯಕರನ್ನು ಕೆಣಕಿತ್ತು.
ನಮ್ಮದು ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಲ್ಲ.
√ ವಲಸೆ ನಾಯಕ @siddaramaiah ಹಾಗೂ ಮಹಾನಾಯಕ @DKShivakumar ನಡುವೆ ಯುದ್ಧ ತಾರಕಕ್ಕೇರಿದೆ.
√ ದಲಿತ ಶಾಸಕ ಅಖಂಡ ಅವರು ಪಕ್ಷದ ನೆರವು ಕೇಳಿದರೂ ಅವರ ವಿರುದ್ಧವೇ ನೋಟಿಸ್ ನೀಡುವ ಬೆದರಿಕೆ ಒಡ್ಡಿದಿರಿ.
√ ಅಖಂಡಗೊಂದು ನ್ಯಾಯ, ಸೌಮ್ಯ ರೆಡ್ಡಿ, ಸಂಗಮೇಶ್ ಅವರಿಗೊಂದು ನ್ಯಾಯ. pic.twitter.com/THcHFJMP2n
— BJP Karnataka (@BJP4Karnataka) April 2, 2021
ಇದಕ್ಕೆ ಟ್ವೀಟ್ ಮೂಲಕವೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ನಿಮ್ಮ ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರು ಬಿಎಸ್‌ವೈ ಅವರ ಮಗನಲ್ಲವೇ? DNA ಟೆಸ್ಟ್ ಮಾಡಿಸಬೇಕೇ? ಎಂದು ಪ್ರಶ್ನಿಸಿ ಎದಿರೇಟು ಕೊಟ್ಟಿದೆ.
'@BJP4Karnataka
ನಿಮ್ಮ ಪಕ್ಷದ ಉಪಾಧ್ಯಕ್ಷ @BYVijayendra ಅವರು @BSYBJP ಅವರ ಮಗನಲ್ಲವೇ?
DNA ಟೆಸ್ಟ್ ಮಾಡಿಸಬೇಕೇ?!ಅಂದಹಾಗೆ ನಿಮ್ಮ ಪಕ್ಷ ಬೆನ್ನೆಲುಬಿಲ್ಲದ ಕಾಡುಮನುಷ್ಯ @nalinkateel ಹಿಡಿತದಲ್ಲಿದೆ ಎನ್ನುವುದು ಪ್ರತಿ ದಿನವೂ ನಡೆಯುತ್ತಿರುವ ಬೀದಿ ಜಗಳದಿಂದ ರಾಜ್ಯದ ಜನತೆಗೆ ತಿಳಿದಿದೆ ಬಿಡಿ! https://t.co/ECLM4Z0hiz
— Karnataka Congress (@INCKarnataka) April 2, 2021
ಇದಕ್ಕೆ ಮತ್ತೊಂದು ಟ್ವೀಟಾಸ್ತ್ರ ಪ್ರಯೋಗಿಸಿರುವ ಬಿಜೆಪಿ, ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಪುತ್ರ, ಡಿಎನ್ಎ ಪರೀಕ್ಷೆ ಮಾಡಿಸಬೇಕಾದಷ್ಟು ಅನಿವಾರ್ಯತೆಯೇ ಇಲ್ಲಿಲ್ಲ. ಆದರೆ, ನೆಹರೂ ಕುಟುಂಬ ಗಾಂಧಿಯಾದ ಬಗ್ಗೆ ಮಾತ್ರ ಭಾರೀ ಅನುಮಾನವಿದೆ. ಮುತ್ತಜ್ಜ ನೆಹರು, ಅಜ್ಜ ಗ್ಯಾಂಡಿ. ಮೊಮ್ಮಕ್ಕಳು ಗಾಂಧಿ ಆಗಿದ್ದು ಹೇಗೆ? ಎಂದು ಪ್ರಶ್ನಿಸಿದೆ. ಗಾಂಧಿ ಮತ್ತು ಗ್ಯಾಂಡಿ ಇದು ಯಾವ ಡಿಎನ್ಎ ಮೂಲಕ ಬಂದಿದ್ದು? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಪುತ್ರ, ಡಿಎನ್ಎ ಪರೀಕ್ಷೆ ಮಾಡಿಸಬೇಕಾದಷ್ಟು ಅನಿವಾರ್ಯತೆಯೇ ಇಲ್ಲಿಲ್ಲ.
ಆದರೆ, ನೆಹರೂ ಕುಟುಂಬ ಗಾಂಧಿಯಾದ ಬಗ್ಗೆ ಮಾತ್ರ ಭಾರೀ ಅನುಮಾನವಿದೆ.
ಮುತ್ತಜ್ಜ ನೆಹರು, ಅಜ್ಜ ಗ್ಯಾಂಡಿ. ಮೊಮ್ಮಕ್ಕಳು ಗಾಂಧಿ ಆಗಿದ್ದು ಹೇಗೆ?@INCKarnataka, ಗಾಂಧಿ ಮತ್ತು ಗ್ಯಾಂಡಿ ಇದು ಯಾವ ಡಿಎನ್ಎ ಮೂಲಕ ಬಂದಿದ್ದು? pic.twitter.com/oqGjrfYtDN
— BJP Karnataka (@BJP4Karnataka) April 2, 2021