ಯಾವುದೇ ಘಟನೆಗಳಿರಲಿ ಘಟನಾ ಸ್ಥಳದಿಂದ ಲೈವ್ ಶೋ ನಡೆಸುವುದ ಸಾಮಾನ್ಯ. ಈ ರೀತಿಯ ಲೈವ್ ಮೂಲಕ ಸುದ್ದಿ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದಾಗಲೇ ವರದಿಗಾರ್ತಿಯೊಬ್ಬಳು ಮುಜುಗರದ ಸನ್ನಿವೇಶಕ್ಕೊಳಗಾದ ಪ್ರಸಂಗದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮನರಂಜನೆ ಒದಗಿಸುತ್ತಿದೆ.
A dog in Russia grabbed the reporter's microphone and ran away during a live broadcast pic.twitter.com/R1T8VZ5Kpt
— Observer (@byz_observer) April 2, 2021
ಪತ್ರಕರ್ತೆಯೊಬ್ಬರು ಲೈವ್ ಸುದ್ದಿ ಬಿತ್ತರಿಸುತ್ತಿದ್ದಾಗ ಹಠಾತ್ ಪ್ರತ್ಯಕ್ಷವಾದ ನಾಯಿಯೊಂದು ಆಕೆಯ ಮೈಕ್ ಕಸಿದು ಪರಾರಿಯಾಗಿದೆ. ಇದು ನಡೆದದ್ದು ರಷ್ಯಾದಲ್ಲಿ. ಮಿರ್ ಟಿವಿ ಪತ್ರಕರ್ತೆ ರಸ್ತೆ ಮಧ್ಯೆ ನಿಂತು ಲೈವ್ ಶೊ ನೀಡುತ್ತಿದ್ದಾಗ ಆಕೆಯ ಬಳಿ ಹಠಾತ್ತನೆ ಜಿಗಿದ ನಾಯಿ, ಮೈಕ್ ಕಸಿದು ಓಡಿದೆ. ಅದನ್ನು ಹಿಂಬಾಲಿಸಿ ಮೈಕ್ ಪಡೆಯಲು ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಗೆ ಮನರಂಜನೆ ನೀಡುತ್ತಿದೆ.