ತೀವ್ರ ಕುತೂಹಲ ಕೆರಳಿಸಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮತ್ತೊಂದು ಟ್ವಿಸ್ಟ್ ಕಂಡಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಬಿಗ್ ಬಾಸ್ ಸ್ಪರ್ಧೆಯಿಂದ ಗೋಲ್ಡ್ ಸುರೇಶ್ ಅವರು ಹೊರ ನಡೆದಿದ್ದಾರೆ ಎಂಬ ಸುದ್ದಿ ಪ್ರೇಕ್ಷಕರನ್ನೂ ನಿರಾಸೆಗೊಳಿಸಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸೀಸನ್ ಇದೀಗ ಹನ್ನೊಂದನೇ ವಾರ ಕ್ರಮಿಸುವ ಹಂತದಲ್ಲಿದ್ದಾಗಲೇ ಗೋಲ್ಡ್ ಸುರೇಶ್ ಅವರು ವಯ್ಯಕ್ತಿಕ ಕಾರಣ ಮುಂದಿಟ್ಟು ಸ್ಪರ್ಧೆಯಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಚೆಗಷ್ಟೇ ಶೋಭಾ ಶೆಟ್ಟಿ ಅವರು ಆರೋಗ್ಯದ ಕಾರಣ ಹೇಳಿ ಸ್ಪರ್ಧೆಯಿಂದ ನಿರ್ಗಮಿಸಿದ್ದರು. ಇದೀಗ ಅದೇ ರೀತಿಯಲ್ಲಿ ಗೋಲ್ಡ್ ಸುರೇಶ್ ಕೂಡಾ ಸ್ಪರ್ಧೆಯ ಅಖಾಡದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಕುಟುಂಬಸ್ಥರ ಅನಾರೋಗ್ಯದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವಿಷಯದ ಬಗ್ಗೆ ಕಾರ್ಯಕ್ರಮ ಸಂಘಟಕರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.