ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಮಂಗಳವಾರ ರಾತ್ರಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ನಲ್ಲಿ ಪ್ರಸಂಗವೊಂದು ವೀಕ್ಷಕರನ್ನು ಬೆಚ್ಚಿ ಬೀಳಿಸಿತು.
ರಿಯಾಲಿಟಿ ಶೋನಲ್ಲಿ ಟಾಸ್ಕ್‌ಗಳು ಸಾಮಾನ್ಯ. ಅದರಂತೆ ಮಂಗಳವಾರವೂ ಬಿಗ್ ಬಾಸ್ ಸ್ಪರ್ದಿಗಳ ನಡುವೆ ಸ್ಪರ್ದೆಯೊಂದು ಏರ್ಪಟ್ಟಿತ್ತು. ಮನುಷ್ಯ ಮತ್ತು ಕೊರೋನಾ ವೈರಸ್ ನಡುವಿನ ಕಾದಾಟದ ಟಾಸ್ಕ್ ಅದಾಗಿತ್ತು. ಕಾಮಿಡಿ ಸ್ಟಾರ್ ಮಂಜು ಪಾವಗಡ ಟೀಂ ಮನುಷ್ಯ ಗಣವಾಗಿದ್ದರೆ, ಪ್ರಶಾಂತ್ ಸಂಬರಗಿ ತಂಡ ವೈರಸ್ ಆಗಿ ಪಾತ್ರ ನಿರ್ವಹಿಸಿತ್ತು. ವೈರಸ್ ತಂಡದವರು ಮನುಷ್ಯ ತಂಡದವರ ಮೇಲೆ ಆಕ್ರಮಣ ಮಾಡುವ ಈ ಟಾಸ್ಕ್ ಆತಂಕದ ಸ್ಥಿತಿಗೆ ಕೊಂಡೊಯ್ದಿತು. ಬಲಪ್ರದರ್ಶನದ ಸಂದರ್ಭದಲ್ಲಿ ನಟಿ ನಿರ್ಮಲ ಅವರು ಅಸ್ವಸ್ಥರಾದರು.
ವೈರಸ್ ಮತ್ತು ಮನುಷ್ಯ ತಂಡಗಳ ನಡುವೆ ಕಾದಾಟ ನಡೆಯುತ್ತಿದ್ದಾಗ ನಿರ್ಮಲ ಅವರ ಮೈಮೇಲೆ ಹಲವು ಸ್ಪರ್ದಿಗಳು ಬಿದ್ದಿದ್ದರಿಂದ ಸಂದಿಗ್ದ ಸ್ಥಿತಿಯಲ್ಲಿ ನಿರ್ಮಲಾ ಸಿಲುಕಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಸ್ಥಳದಲ್ಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಸ್ಥಳದಿಂದ ಕರೆದೊಯ್ಯಲಾಯಿತು. ಈ ಸನ್ನಿವೇಶದ ದೃಶ್ಯ ವೀಕ್ಷಕರನ್ನೂ ಬೆಚ್ಚಿಬೀಳಿಸುವಂತಿತ್ತು.
ಈ ನಡುವೆ ಪ್ರಶಾಂತ್ ಸಂಬರಗಿ ತಂಡದವರು ಇತರ ಸ್ಪರ್ಧಿಗಳ ಕತ್ತನ್ನು ಹಿಸುಕಿ ಆಟವಾಡುತ್ತಿದ್ದ ಬಗ್ಗೆ ಆರೋಪಗಳೂ ಕೇಳಿಬಂದವು. ಈ ರೀತಿಯ ಸ್ಪರ್ಧೆ ರಿಯಾಲಿಟಿ ಶೋಗಳಲ್ಲಿ ಸಾಮಾನ್ಯ. ಆದರೂ ಇದು ಅಪಾಯಕಾರಿ ಎಂಬ ಸಂದೇಶ ಸಾರುವಂತಿತ್ತು ಆ ಸನ್ನಿವೇಶ.