ಮಂಗಳೂರು: ಕೋಸ್ಟಲ್‌ವುಡ್‌ನಲ್ಲೀಗ ‘ಭೋಜರಾಜ್ MBBS’ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದು. ಅದರಲ್ಲೂ ಇದೀಗ ಬಿಡುಗಡೆಯಾಗಿರುವ ಲಿರಿಕಲ್ ಆಡಿಯೊ ಸಾಂಗ್ ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
‘ಬಣ್ಣ ಬಣ್ಣದ ಬದುಕು’ ಸಹಿತ ಹಲವಾರು ಹಿಟ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್, ಕೋಸ್ಟಲ್‌ವುಡ್‌ಗಳಲ್ಲಿ ಛಾಪು ಮೂಡಿಸಿರುವ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಇದೀಗ ‘ಭೋಜರಾಜ್ MBBS’ ಮೂಲಕ ಹೊಸ ಪ್ರಯೋಗ ಮಾಡಿದ್ದಾರೆ. ಹಾಸ್ಯ ಲಾಸ್ಯವಷ್ಟೇ ಅಲ್ಲ, ಕಲಾ ಕ್ಷೇತ್ರದಲ್ಲಿ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದ ಅಭಿನಯ ಚತುರರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನದಲ್ಲೂ ಸಫಲರಾಗಿದ್ದಾರೆ. ಈ ಫಾರ್ಮುಲಾದಲ್ಲಿ ಸಿದ್ದಗೊಂಡಿರುವ ‘ಭೋಜರಾಜ್ MBBS’ ತುಳು ಸಿನಿಮಾ ತೆರೆ ಏರಲು ಸಜ್ಜಾಗಿದೆ.
ಈ ನಡುವೆ, ‘ಬೋಜರಾಜ್ MBBS’ ಚಿತ್ರದ ಆಡಿಯೋ ಲೋಕಾರ್ಪಣೆ ಸಮಾರಂಭ ಗಮನಸೆಳೆಯಿತು.
ದರ್ಬಾರ್ ಸಿನೆಮಾಸ್ ಬ್ಯಾನರಿನಲ್ಲಿ ರಫೀಕ್ ದರ್ಬಾರ್ ನಿರ್ಮಿಸಿ, ಪರ್ವೇಜ್ ಬೆಳ್ಳಾರೆ, ಶರಣ್ ರಾಜ್ ಕಾಸರಗೋಡು ಸಹ ನಿರ್ಮಾಣದ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಬಹು ನಿರೀಕ್ಷಿತ ಹಾಸ್ಯ ಪ್ರದಾನ ತುಳು ಚಿತ್ರ ಇದಾಗಿದೆ. ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಕೊಡಿಯಾಲ್ ಬೈಲ್ ಭಗವತಿ ದೇವಸ್ಥಾನ ದ ಅಡಿತೋರಿಯಂ ನಲ್ಲಿ ನಡೆಯಿತು. ಹಿರಿಯ ಚಿತ್ರ ನಿರ್ಮಾಪಕ ಡಾ.ಸಂಜೀವ ದಂಡಕೇರಿ ಕಾರ್ಯಕ್ರಮ ಉದ್ಘಾಟಿಸಿದರು.
ಡಾ.ಎಂ ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಎಸ್.ಗಣೇಶ್ ರಾವ್ ಅವರು ಆಡಿಯೋ ಬಿಡುಗಡೆಗೊಳಿಸಿದರು. ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಡಾ.ಅಬೂಬಕ್ಕರ್ ಸಿದ್ದೀಕ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಡಾ.ಸತೀಶ್ ಕಲ್ಲಿಮಾರ್, ಡಾ.ದೀಪ್ತಿ, ಬೋಜರಾಜ್ ವಾಮಂಜೂರು, ರಹಿಮ್ ಉಚ್ಚಿಲ್, ಸುದೇಶ್ ಕುಮಾರ್, ಶ್ರೀಪತಿ ಭಟ್, ಭಾಸ್ಕರ್ ದೇವಸ್ಯ, ಮೊದಲಾದ ಗಣ್ಯರು ಭಾಗವಹಿಸಿದರು.
ಬೋಜರಾಜ್ ವಾಮಂಜೂರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿರುವವ ಈ ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಸಾಯಿಕೃಷ್ಣಕುಡ್ಲ, ಉಮೇಶ್ ಮಿಜಾರ್, ರವಿ ರಾಮಕುಂಜ, ಪ್ರಾಣ್ ಶೆಟ್ಟಿ, ಶರಣ್ ರಾಜ್, ರೊನ್ಸ್ ಲಂಡನ್, ಮೊದಲಾದವರ ದೊಡ್ಡ ತಾರಾಗಣವಿದೆ. ಶೀತಲ್ ನಾಯಕ್ ಮತ್ತು ನವ್ಯ ಪೂಜಾರಿ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು ಗರು ಬಾಯಾರು ಮತ್ತು ರಾಜೇಶ್ ಭಟ್ ಮೂಡುಬಿದ್ರೆ ಸಂಗೀತ ನೀಡಿದ್ದಾರೆ. ಶಾಹಾಜನ್ ಮತ್ತು ಉದಯ ಬಳ್ಳಾಲ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದ ಆಡಿಯೋವನ್ನು ಹೆಸರಾಂತ ಸಂಸ್ಥೆ ಅಶ್ವಿನಿ ಆಡಿಯೋದ ಎಆರ್‌ಸಿ ಕನ್ನಡ ಮ್ಯೂಸಿಕ್ ಬಿಡುಗಡೆ ಮಾಡಿದೆ.