ಬೆಂಗಳೂರು: ನಮ್ಮ ರಾಜಧಾನಿ ಬೆಂಗಳೂರಿನ ಖ್ಯಾತ ‘ಬೆಂಗಳೂರು ಟೆಕ್ ಸಮಿಟ್’ ಮೂಲಕ ವಿಶ್ವಮಟ್ಟದಲ್ಲಿ ಇನ್ನಷ್ಟು ಪಸರಿಸಿದೆ. ಅತ್ಯಾಧುನಿಕ ಹಾಗೂ ನಾವೀನ್ಯತೆಯ ಯೋಜನೆಗಳು ಭವಿಷ್ಯದಲ್ಲಿ ಜನೋಪಕಾರಿ ಯೋಜನೆಗಳಿಗೆ ನೆರವಾಗಲಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್-2024 ಶೃಂಗಸಭೆಯಲ್ಲಿ ನಾವೀನ್ಯತೆಗಾಗಿ ಮನ್ನಣೆ ಗಳಿಸಿರುವ ಸಂಸ್ಥೆಗಳಿಗೆ, ವೈಯಕ್ತಿಕ ಸಾಧಕರಿಗೆ ಸಚಿವರು ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರು ಟೆಕ್ ಸಮ್ಮಿಟ್ ಎಂದು ಅಲ್ಲಿ, ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ತಂತ್ರಜ್ಞಾನ, ಪ್ರಗತಿಯ ಮನೋಭಾವ ಸಮ್ಮಿಳಿತವಾಗಿರುತ್ತದೆ. ನಾವು ಉತ್ಕೃಷ್ಟತೆಯನ್ನು ಸಾಧಿಸಲು ಮುಂದಾಗಿದ್ದೇವೆ. ಈ ಟೆಕ್ ಸಮ್ಮಿಟ್ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಬೆಂಗಳೂರು ಅದ್ಭುತ ಕಲ್ಪನೆಗಳ ತವರೂರು ಮತ್ತು ಸ್ಟಾರ್ಟ್ಅಪ್ಗಳಿಗೆ ವಿಶೇಷ ಅವಕಾಶಗಳನ್ನು ತೆರದಿಟ್ಟಿದೆ. ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಉದ್ಯಮಿಗಳು ಕನಸು ಕಾಣಲು, ಅದನ್ನು ನನಸು ಮಾಡಿಕೊಳ್ಳಲು ಇಲ್ಲಿ ಸಾಧ್ಯವಾಗಿದೆ.ಬೆಂಗಳೂರು ಟೆಕ್ ಶೃಂಗಸಭೆಯು ಒಂದು ಪರಂಪರೆಗೆ ಸಾಕ್ಷಿಯಾಗಿದೆ. ನಾವೀನ್ಯತೆ, ಕಲ್ಪನೆಗಳು, ಭವಿಷ್ಯವನ್ನು ರೂಪಿಸಲು, ನಮ್ಮ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಉತ್ತಮ ವೇದಿಕೆ ಒದಗಿಸಿದೆ ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ಟೆಕ್ ಸಮ್ಮಿಟ್ನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗಳು ಕೇವಲ ಮನ್ನಣೆಗೆ ಮಾತ್ರ ನೀಡಿರುವುದಿಲ್ಲ. ನಿಮ್ಮ ಪರಿಶ್ರಮ, ಸೃಜನಶೀಲತೆ ಮತ್ತು ಪರಿವರ್ತನಾತ್ಮಕ ಹಾಗೂ ಉತ್ತೇಜನಾತ್ಮಕ ತಂತ್ರಕ್ಕೆ ಮತ್ತು ನಿಮ್ಮ ಮಿತಿಯನ್ನು ದಾಟಿ ಮಾಡಿರುವ ಸಾಧನೆಗಳಿಗೆ ಸಿಕ್ಕಿರುವ ಗೌರವವಾಗಿದೆ. ಎಂದು ತಿಳಿಸಿದರು.
ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ, ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ, ಪ್ರಧಾನ ಕಾರ್ಯದರ್ಶಿ ಏಕ್ರೂಪ್ ಕೌರ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.