ಬೆಂಗಳೂರು: ಮೈಸೂರು ಬೆಂಗಳೂರು ಹೆದ್ದಾರಿ ಎಕ್ಸ್ ಪ್ರೆಸ್ ವೇ ಟೋಲ್ ಅವಾಂತರ ಬಗ್ಗೆ ಕಾಂಗ್ರೆಸ್ ನಾಯಕರು ಕೇಂದ್ರ ರಾಜ್ಯ ಸರ್ಕಾರಗಳನ್ನು ತರಾಟಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರನೇಶ್ ಬಾಬು ಜಂಟಿ ಸುದ್ದಿಗೋಷೋಷ್ಠಿ ನಡೆಸಿ ಮೈಸೂರು ಬೆಂಗಳೂರು ಹೆದ್ದಾರಿ ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹಿಸುವ ನಡೆ ನಿಯಮ ಬಾಹಿರ ಎಂದಿದ್ದಾರೆ. ಈ ರಸ್ತೆಗಳನ್ನು 60% ಕೇಂದ್ರ ಸರ್ಕಾರ 40% ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಆರಂಭದಲ್ಲಿ ನಾಲ್ಕು ಪಥದಲ್ಲಿದ್ದ ರಸ್ತೆಯನ್ನು 4-3-2014ರಲ್ಲಿ ಕೇಂದ್ರ ಸರ್ಕಾರ ಆಸ್ಕರ್ ಫರ್ನಾಂಡೀಸ್ ಅವರು ಸಚಿವರಾಗಿದ್ದಾಗ 6 ಪಥದ ರಸ್ತೆಗೆ ಏರಿಸಲು ಸಿದ್ದರಾಮಯ್ಯ ಅವರ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು, ಅನುಮೋದನೆ ಸಿಕ್ಕಿತ್ತು. 2017ರಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. 5 ಬಾರಿ ಈ ಯೋಜನೆ ಮೊತ್ತ ಹೆಚ್ಚಾಗಿದೆ. ಆರಂಭದಲ್ಲಿ 3 ಸಾವಿರ ಕೋಟಿ ಇದ್ದ ಅಂದಾಜು ಮೊತ್ತ 2023ರಲ್ಲಿ 12 ಸಾವಿರ ಕೋಟಿಗೆ ಏರಿಕೆಯಾಗಿದೆ ಎಂದು ಲಕ್ಷ್ಮಣ್ ಗಮನಸೆಳೆದರಿದ್ದಾರೆ.
ರಾಮನಗರ ಹಾಗೂ ಮಂಡ್ಯದಲ್ಲಿ 2 ಕಡೆ ಟೋಲ್ ನಿರ್ಮಾಣ ಮಾಡಲಾಗಿದೆ. ನಾಲ್ಕು ಚಕ್ರಗಳ ವಾಹನಕ್ಕೆ ಒಂದು ಕಡೆ 135 ರೂ ಟೋಲ್ ಇದೆ. ಇದೀಗ ಈ ಟೋಲ್ ಅನ್ನು ಶೇ.22 ಏರಿಕೆ ಮಾಡಲಾಗಿದೆ. ಕಾನೂನಿನ ಪ್ರಕಾರ ಟೋಲ್ ಸಂಗ್ರಹಿಸುವ ಅಧಿಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾತ್ರ. ಆದರೆ ಇಲ್ಲಿ ನಾಗ್ಪುರದ ಕಂಪನಿಗೆ ಟೋಲ್ ಸಂಗ್ರಹಿಸುವ ಜವಾಬ್ದಾರಿ ನೀಡಿದ್ದಾರೆ ಎಂದಿದ್ದಾರೆ.
ಮಾಹಿತಿ ಪ್ರಕಾರ ಪ್ರತಿನಿತ್ಯ 90 ಸಾವಿರ ವಾಹನ ಸಂಚಾರ ಮಾಡಲಿದೆ. ಇದರಲ್ಲಿ ಸರಾಸರಿ ಒಂದು ದಿನಕ್ಕೆ 5.50 ಕೋಟಿ ಟೋಲ್ ಸಂಗ್ರಹವಾಗುತ್ತದೆ. ಆರಂಭದ 90 ದಿನಗಳಿಗೆ ಒಪ್ಪಂದ ಮಾಡಿಕೊಂಡು ಟೋಲ್ ಸಂಗ್ರಹಿಸುವ ಅಧಿಕಾರವನ್ನು ಸ್ಕೈಲಾರ್ಜ್ ಕಂಪನಿಗೆ ನೀಡಲಾಗಿದೆ. ಒಪ್ಪಂದದ ಪ್ರಕಾರ ಇವರು ಕೇಂದ್ರ ಸರ್ಕಾರಕ್ಕೆ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರತಿ ನಿತ್ಯ 62 ಲಕ್ಷ ನೀಡಬೇಕು. ಆದರೆ ಇಲ್ಲಿ ಪ್ರತಿನಿತ್ಯ 5.50 ಕೋಟಿ ಟೋಲ್ ಸಂಗ್ರಹವಾಗುತ್ತಿದೆ. ಈ ಕಂಪನಿ 90 ದಿನಗಳಲ್ಲಿ 484 ಕೋಟಿ ಟೋಲ್ ಸಂಗ್ರಹಿಸಲಿದ್ದು, ಇವರು ಸರ್ಕಾರಕ್ಕೆ ಅಥವಾ ಪ್ರಾಧಿಕಾರಕ್ಕೆ 90 ದಿನಗಲಲ್ಲಿ ನೀಡುವ ಹಣ ಕೇವಲ 5 ಕೋಟಿ ಮಾತ್ರ ಎಂದು ಅವರು ಆರೋಪಿಸಿದರು.
ಈಗ ಟೋಲ್ ಏರಿಕೆಯಿಂದ ಕಾರು ಹಾಗೂ ಇತರೆ ನಾಲ್ಕು ಚಂಕ್ರದ ವಾಹನಗಳಿಗೆ 135 ರೂ ಇದ್ದ ಟೋಲ್ 165 ರೂ. ಆಗಲಿದೆ. ಮಿನಿ ಬಸ್ ಗಳಿಗೆ 210ರಿಂದ 270, ಟ್ರಕ್ ಮತ್ತು ಬಸ್ ಟೋಲ್ 440ರಿಂದ 565 ಆಗಿದೆ. ವಾಣಿಜ್ಯ ವಾಹಗಳು 480ರಿಂದ 615 ನೀಡಬೇಕು. ಭಾರಿ ವಾಹನಗಳು 685ರಿಂದ 885 ರೂ. ಟೋಲ್ ನೀಡಬೇಕಿದೆ. ಇನ್ನು ಈ ಒಪ್ಪಂದದಲ್ಲಿ ವಾರ್ಷಿಕವಾಗಿ ಟೋಲ್ ಏರಿಕೆ ಪ್ರಮಾಣವನ್ನು ಶೇ.48ಕ್ಕೆ ನಿಗದಿ ಮಾಡಿದ್ದಾರೆ. ಅಂದರೆ ಈ ವರ್ಷ ಜನ 200 ರೂ. ಟೆಲ್ ನೀಡುತ್ತಿದ್ದರೆ, ಮುಂದಿನ ವರ್ಷ ನೀವು 300 ರೂ. ನೀಡಬೇಕು. ಇದು ಸುಲಿಗೆ ಮಾಡುವ ವ್ಯವಸ್ಥೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆ ಉದ್ಘಾಟನೆಯಾಗಿ ಒಂದು ತಿಂಗಳಾಗಿಲ್ಲ. ಆಗಲೇ ಹೆಚ್ಚಿಸಿದ್ದಾರೆ. ಇದು ಕೇವಲ 55 ಕಿ.ಮೀ ರಸ್ತೆಗೆ ಮಾತ್ರ ಹಾಕುತ್ತಿದ್ದು, ಮತ್ತೊಂದು ಭಾಗದ ರಸ್ತೆಗೆ ಹಾಕಿಲ್ಲ. ಅಲ್ಲಿಯೂ ಹೆಚ್ಚಳ ಮಾಡಿದರೆ ಬೆಂಗಳೂರಿನಿಂದ ಮೈಸೂರಿಗೆ ಒಂದು ಕಡೆಗೆ ಸಾಗಲು 450 ರೂ, ಬೆಂಗಳೂರಿನಿಂದ ಮೈಸೂರಿಗೆ ಹೋಗಿ ವಾಪಸ್ಸಾಗಲು 900 ರೂ. ನೀಡಬೇಕು. ಪಾಸ್ಟ್ಯಾಗ್ ಇಲ್ಲವಾದರೆ ಇದರ ಪ್ರಮಾಣ ದುಪ್ಪಟ್ಟಾಗುತ್ತದೆ ಎಂದು ಲಕ್ಷ್ಮಣ್ ಹೇಳಿದರು.
ಈ ರಸ್ತೆಯ 21 ಕಿ.ಮೀ ನಷ್ಟು ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಇದು ಸರ್ವೀಸ್ ರಸ್ತೆಯಲ್ಲಿ ಸುಮಾರು 37 ಕಿ.ಮೀ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿ ಮಳೆ ನೀರು ಹರಿಯಲು ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಮಳೆ ನೀರು ರಸ್ತೆಯಲ್ಲಿ ನಿಲ್ಲಲಿದೆ. ಒಪ್ಪಂದದ ಪ್ರಕಾರ 88 ಅಂಡರ್ ಪಾಸ್ ಮಾಡಬೇಕಿದೆ. ಅವರು ಮಾಡಿರುವುದು 20 ಮಾತ್ರ. ಓವರ್ ಪಾಸ್ ಗಳು 37 ಮಾಡಬೇಕಿತ್ತು, 7 ಮಾಡಿದ್ದಾರೆ. ಎಡಬದಿಯ ಗ್ರಾಮದವರು ಬಲಬದಿಯ ಗ್ರಾಮಕ್ಕೆ ಹೋಗಲು ಸುಮಾರು 20 ಕಿ.ಮೀ ಸಂಚಾರ ಮಾಡಬೇಕಿದೆ ಎಂದವರು ಹೇಳಿದರು.
ಇನ್ನು ಮೀಸಲಾತಿ ವಿಚಾರದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳನ್ನು ವಿಲನ್ ಗಳಾಗಿ ಮಾಡುವ ಪ್ರಯತ್ನ ಮಾಡುತ್ತಿವೆ. ನಾನು ಈ ಹಿಂಗೆಯೇ ಮುಸಲ್ಮಾನರ ಮೀಸಲಾತಿ ಕಿತ್ತು ನೀಡಲಿದ್ದಾರೆ ಎಂದು ಹೇಳಿದ್ದೆ. ಇದು ನ್ಯಾಯಾಲಯದ ಕಾನೂನಿನಲ್ಲಿ ಊರ್ಜಿತವಾಗುವುದಿಲ್ಲ.
ಚುನಾವಣೆ ಸಮಯದಲ್ಲಿ ಜನರಿಗೆ ಮಂಕುಬೂದಿ ಎರಚಿ 2ಸಿ ಮತ್ತು 2ಡಿ ವರ್ಗಕ್ಕೆ ನೀಡಿದ್ದಾರೆ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಎಂದಿಗೂ ಬೋರೆಯವರ ತಟ್ಟೆಯ ಅನ್ನ ಕಿತ್ತು ತಿನ್ನುವುದಿಲ್ಲ. ಬೇರೆಯವರಿಗೆ ಕೊಟ್ಟಿರುವ ಪರಂಪರೆ ಇದೆ. ಇನ್ನು ಮುಸಲ್ಮಾನ ಸಮುದಾಯಕ್ಕೆ ಈ ಹಿಂದೆ ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿದ್ದು, ಅದನ್ನು ತೆಗೆದು ಈಗ ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿ ನೀಡುತ್ತೇವೆ ಎಂದಿದ್ದಾರೆ. ಜಾತಿ ಆಧಾರದ ಮೇಲೆ ಮೀಸಲಾತಿ ಪಡೆಯುವವರು ಆರ್ಥಿಕ ಆಧಾರದ ಮೇಲೆ ಪಡೆಯಲು ಸಾಧ್ಯವಿಲ್ಲ. ಆರ್ಥಿಕ ಆಧಾರದ ಮೇಲೆ ಮೀಸಲಾತಿ ಪಡೆಯುವವರು ಜಾತಿ ಮೇಲೆ ಮೀಸಲಾತಿ ಪಡೆಯಲು ಆಗುವುದಿಲ್ಲ. ಚುನಾವಣೆ ಸಮಯದಲ್ಲಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಈ ಒಕ್ಕಲಿಗರು ಹಾಗೂ ಲಿಂಗಾಯತರು ಸರ್ಕಾರಕ್ಕೆ ಈ ತೀರ್ಮಾನ ಬೇಡ ಎಂದು ಸರ್ಕಾರಕ್ಕೆ ತಿಳಿಸಲಿ.
ಇನ್ನು ಬಿಜೆಪಿ ಜನರನ್ನು ಹೇಗೆ ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತದೆ ಎಂಬುದಕ್ಕೆ ಒಳ ಮೀಸಲಾತಿ ಸಾಕ್ಷಿ. 2020ರಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ನಾಲ್ಕು ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಾಗ, ಸರ್ಕಾರ ಅದಕ್ಕೆ ಉತ್ತರ ನೀಡುವುದಿಲ್ಲ. ಆದರೆ ಈಗ ವಂದಿತಾ ಶರ್ಮಾ ವರು ಒಳ ಮೀಸಲಾತಿ ವಿಚಾರವಾಗಿ ಪತ್ರ ಬರೆದಿದ್ದು, ಅದರ ಕೊನೆ ಪ್ಯಾರಾದಲ್ಲಿ ಬೋವಿ, ಬಂಜಾರ, ಕೊರಮ ಹಾಗೂ ಕೊರಚ ಸಮುದಾಯ ಪರಿಶಿಷ್ಟ ಜಾತಿ ವಿಭಾಗದಲ್ಲಿ ಉಳಿಯಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರವೇ ಈ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕಿತ್ತುಹಾಕುವಂತೆ ಪತ್ರ ಬರೆಯುತ್ತಾರೆ, ನೀವು ಅವರು ಮುಂದುವರಿಯಲಿದ್ದಾರೆ ಎಂದು ಪತ್ರ ಬರೆದು ಈ ಸಮುದಾಯಗಳನ್ನು ಯಾಮಾರಿಸುತ್ತಿದ್ದೀರಾ? ಇದೇ ಕಾರಮಕ್ಕೆ ಅವರು ಧಂಗೆ ಎದ್ದಿದ್ದಾರೆ. ಬಿಜೆಪಿಯವರೇ ಗಲಾಟೆ ಮಾಡಿಸಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಕಾರಣಕ್ಕೆ ವಿಜಯೇಂದ್ರ ಅವರನ್ನು ವರುಣಾದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ವಿಜಯೇಂದ್ರ ಅವರಲ್ಲ ಯಡಿಯೂರಪ್ಪ ಅವರೇ ಸ್ಪರ್ಧಿಸಿದರೂ ಸಿದ್ದರಾಮಯ್ಯ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ.
ಇನ್ನು ನಿನ್ನೆಯಿಂದ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಹಾಕಲಾಗಿರುವ ಅಧಿಕಾರಿಗಳು ಬಿಜೆಪಿ ಪರವಾಗಿ ಮೃದು ಧೋರಣೆ ಹೊಂದಿರುವವರು. ಸಿದ್ದರಾಮಯ್ಯ ಅವರು ಮೊನ್ನೆ ತಮ್ಮ ಊರಿಗೆ ಹೋದರೆ ಅಲ್ಲಿ ಸಭೆ ನಡೆಸಬಾರದು ಎಂದು ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಆಯೋಗ ಪ್ರಚಾರ ಮಾಡಬಾರದು ಎಂದು ನೀತಿ ಸಂಹಿತೆ ಜಾರಿ ಮಾಡಿದೆಯೇ? ನಮ್ಮ ಮಾಹಿತಿ ಪ್ರಕಾರ 300 ಐಟಿ ಅಧಿಕಾರಿಗಳನ್ನು ರಾಜ್ಯಕ್ಕೆ ಕರೆ ತಂದಿದ್ದು, ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವ 150 ಕ್ಷೇತ್ರಗಳಲ್ಲಿ ಇವರನ್ನು ಅಭ್ಯರ್ಥಿ ಹಿಂದೆ ಬಿಟ್ಟಿದ್ದಾರೆ. ಹುಣಸೂರಿನ ಶಾಸಕರು ನಮ್ಮ ಕ್ಷೇತ್ರಕ್ಕೆ 5 ಕೋಟಿ ಹಣ ಬರುತ್ತಿದೆ ಎಂದು ದೂರು ನೀಡಿದರೂ ಒಬ್ಬರೂ ಪರಿಶೀಲನೆ ಮಾಡಲಿಲ್ಲ. ಚುನಾವಣಾ ಆಯೋಗ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ನೀವು ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಬೇಕು. ಈ ವಿಚಾರವಾಗಿ ನಾವು ಒಂದೆರಡು ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಈಗಾಗಲೇ ಬಿಜೆಪಿ ಬೇರೆ ರಾಜ್ಯಗಳಲ್ಲಿ ಎಟಿಎಂ ಹಣ ಸಾಗಾಟ ವಾಹನ, ಆಂಬುಲೆನ್ಸ್, ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಿದ್ದಾರೆ.