ಬಳ್ಳಾರಿ: ಬಳ್ಳಾರಿ ಗ್ರಾಮೀಣ ತಾಲೂಕು ಮೋಕಾ ಹೋಬಳಿಯಲ್ಲಿನ ಸಮುದಾಯ ಅರೋಗ್ಯ ಕೇಂದ್ರದ ವತಿಯಿಂದ ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ನೆರವೇರಿತು.
ಸಸಿ ನೆಡುವ ಮೂಲಕ ಡಾ. ಭಾರತಿ ಅವರು ಕಾರ್ಯಕ್ರಮವನ್ನು ನೆರವೇರಿಸಿದರು. ಈ ವೇಳೆ ಮಾತನಾಡಿದ ಹಿರಿಯ ದಂತ ವೈದ್ಯ ಡಾ.ಅರ್ಜುಮುನ್ನಿಸಾ, ಇಂದಿನ ಘೋಷಣಾ ವಾಕ್ಯವಾದ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು’ ಅಗತ್ಯವಾಗಿದೆ ಎಂದರು. ‘ವಿಶ್ವ ಪರಿಸರ ದಿನಾಚರಣೆ’ ಮಹತ್ವ, ಪರಿಸರ ನಮ್ಮ ಜೀವನದಲ್ಲಿ ಪ್ರಾಮುಖ್ಯತೆಯನ್ನು ಹಾಗೂ ಅರೋಗ್ಯ ಜೀವನ ಉತ್ತಮ ಗಾಳಿ ಪರಿಸರದ ಕೊಡುಗೆ ಬಗ್ಗೆ ತಿಳಿದ ನಾವು ಹಸಿರನ್ನ ಉಳಿಸಬೇಕು, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಅದು ಪರಿಸರದಲ್ಲಿ ವಿಲೀನ ಆಗುವುದಿಲ್ಲ. ಇದರಿಂದ ಪರಿಸರ ಮಾಲಿನ್ಯ ಆಗುತ್ತದೆ. ಮುಂದಿನ ಜನಾಂಗಕ್ಕೆ ಉತ್ತಮ ಉಸಿರಾಟಕ್ಕೆ ಇದು ಸಹಾಯ ಆಗುತ್ತದೆ ಎಂದರು.
ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿ ವಿ.ಬಸವರಾಜ್ ಅವರು ಕಾರ್ಯಕ್ರಮದಲ್ಲಿ ಙಾಗಿಯಾದ ಪರಿಸರ ಪ್ರೇಮಿಗಳಿಗೆ ‘ಪ್ರತಿಜ್ಞಾ ವಿಧಿ’ ಭೋದಿಸಿದರು.
ಪ್ರಸೂತಿ ತಜ್ಞ ವೈದ್ಯರು ಡಾ.ಪರಿಮಳ ದೇಸಾಯಿ, ಮಕ್ಕಳ ತಜ್ಞ ವೈದ್ಯರಾದ ಡಾ.ಸಂಜೀವ್, ಕಚೇರಿ ಅಧೀಕ್ಷಕ ಸಂತೋಷ್ ಕುಮಾರ್, ಹಿರಿಯ ಅರೋಗ್ಯ ನಿರೀಕ್ಷಕ ಬಸವರಾಜ್, ಫಾರ್ಮಸಿ ಅಧಿಕಾರಿಗಳಾದ ಶೇಷಾಗಿರಿ ಮತ್ತು ಶುಶ್ರುಶಕರಾದ ಉಷಾ, ನಯನ, ಮಂಜುಳಾ, ಸುಪ್ರಿಯಾ, ಜಗನ್ಮಾತೆ ಮೊದಲಾದವರು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದರು.