ಬ್ರಾಸೆಲ್ಸ್: ಫೂಟ್ಬಾಲ್ ಪಂದ್ಯಾವಳಿಯಲ್ಲಿನ ಸೋಲು ಬೆಲ್ಜಿಯಂನ ಹಲವೆಡೆ ರೋಷಾಗ್ನಿಯನ್ನು ಎಬ್ಬಿಸಿದೆ. ಕತಾರ್ ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಮೊರಾಕ್ಕೊ ವಿಜಯ ಸಾಧಿಸಿದೆ. ಆದರೆ ಸೋಲುಂಡ ಬೆಲ್ಜಿಯಂನ ಫುಟ್ಬಾಲ್ ಅಭಿಮಾನಿಗಳು ತಮ್ಮ ದೇಶದ ಆಟಗಾರರ ವೈಫಲ್ಯದ ವಿರುದ್ದ ರೊಚ್ಚಿಗೆದ್ದಿದ್ದಾರೆ.
International press reports that Belgian fans are rioting in Brussels after Belgium lost 2-0 to Morocco at the World Cup in Qatar an hour ago.
Videos seem to suggest that it is rather Moroccan fans who are rioting. pic.twitter.com/9mVfpkmFk4
— Visegrád 24 (@visegrad24) November 27, 2022
ಅನಿರೀಕ್ಷಿತ ಸೋಲನ್ನು ಅರಗಿಸಿಕೊಳ್ಳಲಾಗದ ಬೆಲ್ಜಿಯಂ ಅಭಿಯಾನಿಗಳು ದಂಗೆ ಎದ್ದಿದ್ದು, ಹಲವೆಡೆ ಗಲಭೆಗಳು ನಡೆದಿವೆ, ಮೊರೊಕನ್ ಧ್ವಜಗಳನ್ನು ಧರಿಸಿ ದಾಂಧಲೆ ನಡೆಸಿದ್ದಾರೆ. ಗುಂಪು ಪೊಲೀಸರು ಜಲ ಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.
ಈ ನಡುವೆ ಗಲಭೆ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.























































