ಬೆಳಗಾವಿ: ವಿಧಾನಪರಿಷತ್‌ನ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಶಿರಗುಪ್ಪಿ, ಶೇಂಡೂರ, ನಾಗನೂರು, ಜತ್ರಾಟ, ಪಡಿಲಿಹಾಳ ಹಾಗೂ ಅಕ್ಕೋಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಂಜೂರಾದ ರಸ್ತೆ ಹಾಗೂ ವಿವಿಧ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ್ ಕೋಟೆವಾಲೆ, ಎಂ ಪಿ ಪಾಟೀಲ್, ಸಂಜಯ್ ಸಿಂತ್ರೆ, ಸಚಿನ ಜಾಧವ್ ಹಾಗೂ ಗ್ರಾಮ ಪಂಚಾಯಿತಿ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.