ಕಡಲತಡಿಯಲ್ಲೊಂದು ‘ಸೇವಾ ಜಾಗರಣ ಆಸರೆ’ ಸೈನ್ಯ.. ನಿರ್ಗತಿಕರ ಬದುಕಿಗೆ ಆಸರೆ ಕಲ್ಲಿಸಿ ಸರ್ಕಾರವನ್ನೇ ನಾಚಿಸಿದ ಯುವಸೈನ್ಯ
ಮಂಗಳೂರು: ಸಂಸ್ಕೃತಿ ಕಾಯುವ ಯೋಧರ ಗುಂಪೊಂದು ಸಾಮಾಜಿಕ ಕೈಂಕರ್ಯಕ್ಕಿಳಿದಿದೆ. ಸರ್ಕಾರವು ಸೂರು ಕಲ್ಪಿಸದಿದ್ದಾಗ ತಾವೇ ಆ ಕೆಲಸ ಮಾಡಿ ಸಶಕ್ತ ಸಮಾಜ ನಿರ್ಮಾಣಕ್ಕೆ ಈ ಗುಂಪು ಪಣ ತೊಟ್ಟಿದೆ.
ಹೌದು, ಹಿಂದೂ ಸಂಘಟನೆಯು ಧರ್ಮ-ಸಂಸ್ಕೃತಿ ಉಳಿವಿನ ಹೋರಾಟಕದಕಷ್ಟೇ ಸೀಮಿತವಲ್ಲ. ಸಮಾಜಿಕ ವ್ಯವಸ್ಥೆಯ ಸಬಲೀಕರಣದತ್ತಲೂ ಗಮನಹರಿಸಬೇಕಿದೆ ಎಂಬ ಸಂದೇಶವನ್ನು ಈ ಹಳ್ಳಿ ಹುಡುಗರು ‘ಸೇವಾ ಜಾಗರಣ’ ಎಂಬ ತಂಡ ಕಟ್ಟಿ, ತಮ್ಮ ಕಾರ್ಯದ ಮೂಲಕ ದಿಲ್ಲಿ ನಾಯಕರಿಗೆ ರವಾನಿಸಿದ್ದಾರೆ.
ಸಂಘದ ಚಟುವಟಿಕೆಗಳಲ್ಲಿ ಪ್ರಬಲ ನೆಲವಾಗಿ ಗುರುತಾಗಿರುವ ಬಂಟ್ವಾಳದ ತೆಂಕಬೆಳ್ಳೂರಿನ ಯುವಸೈನ್ಯ ಈ ಕೆಲಸಕ್ಕಿಳಿದಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಹಿಂದೂ ಕಾರ್ಯಕರ್ತರು ಕೋವಿಡ್ ಕೇರ್ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಜಾತಿ-ಧರ್ಮ-ಪಕ್ಷ ಎನ್ನದೆ ಸಮಸ್ತ ಸಮಾಜಹಿತ ಬಯಸಿ, ಸೆವಾ ಭಾರತಿಯ ಮುಂದಾಳುತ್ವದಲ್ಲಿ ಈ ಮಹಾತ್ಕಾರ್ಯ ಕೈಗೊಂಡರೆ, ಮೋದಿ ಆಡಳಿತ ವರ್ಷದ ಸಂದರ್ಭದಲ್ಲಿ ದೇವಾಲಯ ಪುನರುತ್ಥಾನದ ಕೈಂಕರ್ಯ ನಡೆಸಿ ಗಮನಸೆಳೆದಿದ್ದರು. ಇದೀಗ ತೆಂಕಬೆಳ್ಳೂರಿನ ಇದೇ ಹಿಂದೂ ಕಾರ್ಯಕರ್ತರು ಸೂರಿಲ್ಲದ ಬಡ ಕುಟುಂಬಗಳಿಗೆ ಮನೆಕಟ್ಟಿಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಏನಿದು ಸೂರಿನ ವಿಷಯ..?
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದಲ್ಲಿ ಸಂಘಪರಿವಾರದ ಶಿಕ್ಷಿತ ಯುವಕರು ತಮ್ಮದೇ ರೀತಿಯ ಸೇವಾ ಕಾರ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ನಾಡು ಕಟ್ಟುವ ಯೊಚನೆ ಹೊಳೆದು ಈ ಯುವಕರು, ಸೂರಿಲ್ಲದ ಬಡ ಮಂದಿಗೆ ಮನೆ ಕಟ್ಟಿಕೊಡುವ ಕೆಲಸಕ್ಕೆ ತಯಾರಿ ಕೈಗೊಂಡರು. ಅದರಂತೆ ತೆಂಕಬೆಳ್ಳೂರು ಸಮೀಪದ ಕೊಪ್ಪಳ ಎಂಬಲ್ಲಿ ಪುಟ್ಟ ಬಡ ಕುಟುಂಬವೊಂದು ಬೀದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಕುಟುಂಬಕ್ಕೆ ನೆರವಾಗುವ ಕೈಂಕರ್ಯ ಮೂಲಕವೇ ಈ ಮಹಾಕಾರ್ಯಕ್ಕೆ ಮುನ್ನುಡಿ ಬರೆದರು.
ಬಡ ಕುಟುಂಬದ ವ್ಯಥೆಯು ಕಥೆಯಾದಾಗ..!!
ಕೊಪ್ಪಳದ ಈ ಬಡ ಕುಟುಂಬದ ಯಜಮಾನ ಕರುಣಾಕರ ಕಳೆದ 3 ವರುಷದಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ಈ ಸಂಸಾರದ ಚಿಕ್ಕ ಮಕ್ಕಳ ವಿದ್ಯಾಭ್ಯಾಸದೊಂದಿಗೆ ಮನೆಯ ಜವಾಬ್ದಾರಿ ಹೊತ್ತವರು ಅವರ ಪತ್ನಿ ಕುಸುಮಾ. ಮಕ್ಕಳ ಶಿಕ್ಷಣದ ಹೊರೆ, ಪತಿಯ ಅನಾರೋಗ್ಯದ ಸುಳಿಯಲ್ಲಿದ್ದ ಇವರಿಗೆ ಒಪ್ಪೊತ್ತಿನ ಊಟಕ್ಕೂ ತಾತ್ವಾರ. ಮನೆ ಮನೆ ತೆರಳಿ ಕೆಲಸ ಮಾಡಿ ಗಳಿಸಿದ ಗಳಿಕೆಯೇ ಈ ಸಂಸಾರಕ್ಕೆ ಜೀವಾನಧಾರ. ಈ ನಡುವೆ, ಆಗಲೋ ಈಗಲೋ ಧರೆಗುರುಳುವ ದುಸ್ಥಿತಿಯಲ್ಲಿರುವ ಮನೆಯಲ್ಲೇ ಇವರ ವಾಸ. ಮಳೆ ಬಂದಾಗ ಮನೆಯ ಹೊರಗಡೆ ಇರುವ ಮರವೇ ಆಶ್ರಯ ತಾಣ.
ಈ ಪರಿವಾರದ ದುಸ್ತರ ಬದುಕಿನ ಸ್ಥಿತಿ ಕಂಡು ಮಮ್ಮಲ ಮರುಗಿದ ಯುವಕರು, ಸಮಾಜಿಕ ಕೈಂಕರ್ಯಕ್ಕೆಂದು ಸೇವಾ ಜಾಗರಣ ಎಂಬ ಗುಂಪು ಕಟ್ಟಿ ಅಖಾಡಕ್ಕಿಳಿದರು. ಶ್ರಮಾದಾನ ಮೂಲಕ ಈ ಕುಟುಂಬಕ್ಕೆ ತಾತ್ಕಾಲಿಕ ಆಸರೆ ಕಲ್ಲಿಸಿದ ಈ ಹಿಂದೂ ಕಾರ್ಯಕರ್ತರು, ಇದೀಗ ಸುಭದ್ರ ಮನೆ ನಿರ್ಮಿಸಿಕೊಡಲು ಮುಂದಾಗಿದ್ದಾರೆ. ಇದಕ್ಕಾಗಿ ಸಂಘ, ವಿವಿಧ ಕ್ಷೇತ್ರಗಳ ಕಾರ್ಯಕರ್ತರಿಂದಲೇ ಸಿಮೆಂಟ್, ಮರ, ಕಲ್ಲು, ಇಟ್ಟಿಗೆ ಮರಳು ಸಹಿತ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಗಾರೆ ಮತ್ತಿತರ ಕೆಲಸಗಳಿಗಾಗಿ ಪರಿಣಿತರ ಅಗತ್ಯವಿದ್ದು ಅವರ ವೆಚ್ಚ ಭರಿಸುವ ಸಂಬಂಧ ಹಣಕಾಸಿನ ವ್ಯವಸ್ಥೆಯನ್ನೂ ಇದೇ ಕಾರ್ಯಕರ್ತರು ಸದ್ದಿಲ್ಲದೆ ಮಾಡಿ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಮೋದಿ ಐಕಾನ್ ಬಳಿಸಿ inspired India ವಾಟ್ಸಪ್ ಗ್ರೂಪ್ ಕಟ್ಟಿಕೊಂಡು ಸಾಗಿದ ಸೇವಾ ಜಾಗರಣದ ಯುವಕರ ಪ್ರಯತ್ನ ಇಡೀ ದೇಶಕ್ಕೆ ಮಾದರಿಯಾಗಿದೆ.
ಇದೀಗ, ಸೇವಾ ಜಾಗರಣಾ ಆಸರೆ ಕಾರ್ಯಯೋಜನೆಗೆ ಶ್ರಮದಾನದ ಮೂಲಕ ವಿವಿಧ ಸಂಘಟನೆಗಳೂ ಕೈಜೋಡಿಸಿವೆ. ಈ ಪೈಕಿ ಕಮ್ಮಾಜೆಯ ನಾಗಶ್ರೀ ಮಿತ್ರ ವೃಂದ, ತೆಂಕಬೆಳ್ಳೂರು ಹಿಂದೂ ಜಾಗರಣ ವೇದಿಕೆ, ಕಡೆಶಿವಾಲಯದ ಯುವಶಕ್ತಿ ತಂಡ, ರಾಮ್ ಪ್ರೆಂಡ್ಸ್ ಕಟೀಲ್ ಸೇವಾ ತಂಡ ಮುಂಚೂಣಿಯಲ್ಲಿವೆ.