ಲಕ್ನೋ: ಪುಣ್ಯ ಕ್ಷೇತ್ರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರ. 2024ರ ಮಕರ ಸಂಕ್ರಾಂತಿಯಂದು ಉದ್ಘಾಟನೆಯಾಗಲಿದೆಯಂತೆ. ಇದಕ್ಕಾಗಿ ಸಿದ್ದತಾ ಪ್ರಕ್ರಿಯೆ ಸಾಗಿದೆ ಎಂದು ರಾಮ ಜನ್ಮಭೂಮಿ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಮುಂದಿನ ವರ್ಷಾಂತ್ಯದ ವೇಳೆಗೆ ರಾಮ ಜನ್ಮಭೂಮಿ ದೇವಸ್ಥಾನ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದೆ. ಆದರೆ, ಸೂರ್ಯ ದಕ್ಷಿಣಾಯಣದಲ್ಲಿ ಇರುವುದರಿಂದ ಆ ಸಮಯದಲ್ಲಿ ದಿನಾಂಕಗಳನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಅವರು, ಸೂರ್ಯ ಉತ್ತರಾಯಣ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯಂದು ಭವ್ಯವಾದ ದೇವಾಲಯವನ್ನು ಲೋಕಾರ್ಪಣೆ ಮಾಡುವ ಪ್ರಯತ್ನ ಸಾಗಿದೆ ಎಂದಿದ್ದಾರೆ.
2020ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಲಾಗಿತ್ತು. ರಾಮನ ಮೂರ್ತಿ ಪ್ರತಿಷ್ಠಾಪಿಸಲು ಆರು ಅಡಿ ಎತ್ತರದ ಪೀಠ ಈಗಾಗಲೇ ಸಿದ್ಧವಾಗಿದೆ. ಫೌಂಡೇಶನ್ ಹಾಗೂ ಇತರ ಕೆಲಸಗಳು ಮುಗಿಯುತ್ತಿದ್ದಂತೆ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮಂದಿರಕ್ಕಾಗಿ ಕಲ್ಲುಗಳ ಕೆತ್ತನೆ ಕಾರ್ಯಗಳಿಗೆ ಅಂತಿಮ ಸ್ಪರ್ಷ ಸಿಕ್ಕಿದೆ. 2020ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಲಾಗಿತ್ತು.