ಮಂಗಳೂರು: ಪವರ್ ಲಿಫ್ಟಿಂಗ್ ತಾರೆ ಅಕ್ಷತಾ ಪೂಜಾರಿ ಮತ್ತೊಮ್ಮೆ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ. ಭಾರತಕ್ಕೆ ಮತ್ತೊಂದು ಸ್ವರ್ಣ ಪುರಸ್ಕಾರ ತಂದುಕೊಟ್ಟಿರುವ ತುಳುನಾಡಿನ ವನಿತೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ದಕ್ಷಿಣ ಆಫ್ರಿಕಾದ ಪೊಚೆಪ್ಪೋಮ್‌ನಲ್ಲಿ ಶನಿವಾರ ನಡೆದ ಏಷ್ಯಾ- ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ಚಾಂಪಿಯನ್‌ಶಪ್‌ಗಾಗಿ ನಡೆದ ಸೆಣಸಾಟದದಲ್ಲಿ ಅಕ್ಷತಾ ಗೆದ್ದು ಬೀಗಿದ್ದಾರೆ. ಸೀನಿಯರ್ 52ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.