ಕಾಬೂಲ್: ಹಲವು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ತಾಲಿಬಾನ್ ಉಗ್ರರು ಇದೀಗ ಬಾಲ ಬಿಚ್ಚಿದ್ದಷ್ಟೇ ಅಲ್ಲ, ಆಫ್ಘಾನಿಸ್ಥಾನದಲ್ಲಿ ಅಟ್ಟಹಾಸ ಮೆರೆಯಲಾರಂಭಿಸಿದ್ದಾರೆ.
ಅಫಘಾನಿಸ್ಥಾನದಲ್ಲಿ ಹಿಡಿತ ಸಾಧಿಸಿರುವ ತಾಲೀಬಾನ್ ಉಗ್ರರು ಅಲ್ಲಿನ ಅಧ್ಯಕ್ಷರ ನಿವಾಸ ಹಾಗೂ ಸರ್ಕಾರಿ ಕಚೇರಿಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
This is probably following this incident #Kabul https://t.co/tVQSjXJ9v9
— AIRLIVE (@airlivenet) August 16, 2021
ಈ ಬೆಳವಣಿಗೆಯಿಂದ ಆತಂಕಗೊಂಡಿರುವ ಅಲ್ಲಿರುವ ವಿದೇಶಿಯರು ತವರಿಗೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಸಿಕ್ಕ ಸಿಕ್ಕ ವಿಮಾನಗಳನ್ನು ಏರಲು ಪರದಾಡುತ್ತಿರುವ ಸನ್ನಿವೇಶ ನೋಡುಗರನ್ನು ಬೆಚ್ಚಿಬೀಳಿಸುವಂತಿದೆ.
ಈ ನಡುವೆ, ವಿಮಾನದ ಒಳಗೆ ಹೋಗಲು ಸಾಧ್ಯವಾಗದೆ ಚಕ್ರ ಹಾಗೂ ರೆಕ್ಕೆಗಳೆಡೆ ಉಳಿದುಕೊಂಡ ಕೆಲವು ಯುವಕರು, ಆ ವಿಮಾನ ಟೇಕಾಫ್ ಆದಾಗ ನೆಲಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
https://twitter.com/rajRSSBJP/status/1427286656126656518