ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾ ಬಗ್ಗೆ ಇದ್ದ ಕುತೂಹಲ ತಣ್ಣಗಾಗಿದೆ. ಈ ವರೆಗೂ ವಿಜಯ್ ದೇವರಕೊಂಡ ಅವರ ಮುಂಬರುವ ಸಿನಿಮಾವನ್ನು ‘VD12’ ಎಂದು ಕರೆಯಲಾಗುತ್ತಿತ್ತು. ಇದೀಗ ಚಿತ್ರದ ಟೈಟಲ್ ಅನಾವರಣ ಆಗಿದೆ. ಟೀಸರ್ ಕೂಡ ಬಿಡುಗಡೆ ಆಗಿದ್ದು, ನೂತನ ಸಿನಿಮಾಗೆ ‘ಕಿಂಗ್ಡಮ್’ ಎಂದು ಹೆಸರಿಡಲಾಗಿದೆ.
ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ‘ಕಿಂಗ್ಡಮ್’ ಸಿನಿಮಾದ ಟೀಸರ್ ಬಿಡುಗಡೆಯಾಗಿವೆ. ತೆಲುಗಿನಲ್ಲಿ ಜೂನಿಯರ್ ಎನ್ಟಿಆರ್, ಹಿಂದಿಯಲ್ಲಿ ರಣಬೀರ್ ಕಪೂರ್ ಹಾಗೂ ತಮಿಳಿನಲ್ಲಿ ಸೂರ್ಯ ಅವರು ‘ಕಿಂಡ್ಕಮ್’ ಟೀಸರ್ಗೆ ಧ್ವನಿ ನೀಡಿರುವುದು ವಿಶೇಷ..