ಅಮರಾವತಿ: ಪೊಲೀಸ್ ವಲಯವನ್ನು ಬೆಚ್ಚಿಬೀಳಿಸಿದ ದಾರುಣ ಘಟನೆ ಇದು. ಪುಣೆಯಲ್ಲಿ ಅಮರಾವತಿ ಎಸಿಪಿ ಭರತ್ ಎಸ್. ಗಾಯಕ್ವಾಡ್ (57) ಅವರೇ ಡಬಲ್ ಮರ್ಡರ್ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಮುಂಜಾನೆ 3-4 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಅಮರಾವತಿ ನಗರ ಪೊಲೀಸ್‌ನ ರಾಜಪೇತ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾಯಕ್‌ವಾಡ್ ಅವರು ತಮ್ಮ ಸರ್ವಿಸ್ ಪಿಸ್ತೂಲ್ ನಲ್ಲಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಎಸಿಪಿ ಗಾಯಕ್‌ವಾಡ್ ಅವರ ಪತ್ನಿ ಮೋನಿ (44 ವರ್ಷ) ಮತ್ತು ಅವರ ಸೋದರಳಿಯ ದೀಪಕ್ (34 ವರ್ಷ) ಅವರು ಕೊಲೆಗೀಡಾಗಿದ್ದಾರೆ. ಗಾಯಕ್‌ವಾಡ್‌ಗೆ ಇಬ್ಬರು ಮಕ್ಕಳಿದ್ದು, ಅವರು ಪುಣೆಯ ಬನೇರ್‌ನಲ್ಲಿ ಅವರ ಪತ್ನಿ ಮತ್ತು ಮೃತ ಸೋದರಳಿಯನೊಂದಿಗೆ ವಾಸಿಸುತ್ತಿದ್ದರು. ಅಮರಾವತಿಯಲ್ಲಿರುವ ತಮ್ಮ ಡ್ಯೂಟಿ ಸ್ಟೇಷನ್‌ನಿಂದ ಶನಿವಾರ ರಜೆಗೆಂದು ಮನೆಗೆ ಮರಳಿದ್ದರು. ಈ ನಡುವೆ ಈ ಘೋರ ಕೃತ್ಯ ನಡೆದಿದೆ.



















































