ಬೆಂಗಳೂರು: ಚುನಾವಣಾ ಸಮೀಕ್ಷೆಗಳ ಮೂಲಕ ಖ್ಯಾತಿಯಾಗಿರುವ ‘ಎಬಿಪಿ-ಸಿಓಟರ್’ ಇದೀಗ ಮತ್ತೆ ಗಮನಸೆಳೆದಿದೆ. ಈ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿ ಹಾಗೂ ಕುತೂಹಲದ ಫಲಿತಾಂಶ ವ್ಯಕ್ತವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿರುವಂತೆಯೇ ‘ಎಬಿಪಿ-ಸಿಓಟರ್’ ನಡೆಅಇರುವ ಚುನಾವಣಾ ಪೂರ್ವ ಫಲಿತಾಂಶವೂ ಬಹಿರಂಗವಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಬಹುದು ಎಂದು ಸಮೀಕ್ಷೆ ಮುನ್ಸೂಚನೆ ನೀಡಿದೆ.:
ಒಟ್ಟು ಸ್ಥಾನಗಳು : 224
ಕಾಂಗ್ರೆಸ್ : 115-127
ಬಿಜೆಪಿ : 68- 80
ಜೆಡಿಎಸ್ : 23-35
ಇದು ಇಡೀ ರಾಜ್ಯದ ಫಲಿತಾಂಶವಾದರೆ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ಹೇಳಿದೆ.
ಜೆಡಿಎಸ್ : 26-27
ಕಾಂಗ್ರೆಸ್ : 25-28
#DeshKaMoodOnABP | abp न्यूज़ के सर्वे में कांग्रेस को मिला बहुमत, एक्सपर्ट की सुनिए राय……@RubikaLiyaquat | @romanaisarkhan | https://t.co/smwhXUROiK #Karnataka #KarnatakaElections2023 #BJP #Congress #ABPOpinionPoll pic.twitter.com/gSPoJwL9UU
— ABP News (@ABPNews) March 29, 2023
ಹೈದರಾಬಾದ್ ಕರ್ನಾಟಕ ಭಾಗದಲ್ಲೂ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳತ್ತ ಎಬಿಪಿ-ಸಿಓಟರ್ ಸಮೀಕ್ಷೆ ಬೊಟ್ಟು ಮಾಡಿದೆ.
ಕಾಂಗ್ರೆಸ್ : 19-23
ಬಿಜೆಪಿ : 08-12
ಮುಂಬೈ ಕರ್ಮಾಟಕ ಭಾಗದಲ್ಲೂ ಅದೇ ರೀತಿಯ ಫಲಿತಾಂಶ ಸಧ್ಯತೆ ಬಗ್ಗೆ ಸಮೀಕ್ಷೆ ಹೇಳುತ್ತಿದೆ.
ಕಾಂಗ್ರೆಸ್ : 25-29
ಬಿಜೆಪಿ 21-25
ಮಧ್ಯ ಕರ್ನಾಟಕ ಭಾಗದ ಜಿಲ್ಲೆಲ್ಲೂ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆಯಂತೆ.
ಕಾಂಗ್ರೆಸ್ : 18-22
ಬಿಜೆಪಿ : 12-16
ಜೆಡಿಎಸ್ : 00-02
ಇದೇ ವೇಳೆ, ತೀವ್ರ ಕುತೂಹಲಕಾರಿ ಫಲಿತಾಂಶ ಬೆಂಗಳೂರು ನಗರ ವ್ಯಾಪ್ತಿಯಲ್ಲೂ ಸಿಗಲಿದೆ.
ಬೃಹತ್ ಬೆಂಗಳೂರು ವ್ಯಾಪ್ತಿಯ 32 ಸ್ಥಾನಗಳ ಪೈಕಿ ಬಹುತೇಕ ಕಡೆ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸಲಿದೆಯಂತೆ.
ಕಾಂಗ್ರೆಸ್ : 15-19
ಬಿಜೆಪಿಯ – 11-15
ಜೆಡಿಎಸ್ : 00-03
ಕರಾವಳಿ ಭಾಗದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಸೆಣಸಾಟ ನಡೆಯಲಿದೆ. ಕರಾವಳಿ ಜಿಲ್ಲೆಗಳ 21 ಸ್ಥಾನಗಳ ಪೈಕಿ ಎರಡೂ ಪಕ್ಷಗಳು ಸಮಬಲ ಸಾಧಿಸುವ ಸಾಧ್ಯತೆಗಳಿವೆ ಎಂದು ಈ ಸಮೀಕ್ಷೆಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಬಿಜೆಪಿ : 09-13
ಕಾಂಗ್ರೆಸ್ : 08-12