ಬೆಂಗಳೂರು: ಚುನಾವಣಾ ಸಮೀಕ್ಷೆಗಳ ಮೂಲಕ ಖ್ಯಾತಿಯಾಗಿರುವ ‘ಎಬಿಪಿ-ಸಿಓಟರ್’ ಇದೀಗ ಮತ್ತೆ ಗಮನಸೆಳೆದಿದೆ. ಈ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿ ಹಾಗೂ ಕುತೂಹಲದ ಫಲಿತಾಂಶ ವ್ಯಕ್ತವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿರುವಂತೆಯೇ ‘ಎಬಿಪಿ-ಸಿಓಟರ್’ ನಡೆಅಇರುವ ಚುನಾವಣಾ ಪೂರ್ವ ಫಲಿತಾಂಶವೂ ಬಹಿರಂಗವಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಬಹುದು ಎಂದು ಸಮೀಕ್ಷೆ ಮುನ್ಸೂಚನೆ ನೀಡಿದೆ.:
ಒಟ್ಟು ಸ್ಥಾನಗಳು : 224
ಕಾಂಗ್ರೆಸ್ : 115-127
ಬಿಜೆಪಿ : 68- 80
ಜೆಡಿಎಸ್ : 23-35
ಇದು ಇಡೀ ರಾಜ್ಯದ ಫಲಿತಾಂಶವಾದರೆ ಕರಾವಳಿ ಭಾಗದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಸೆಣಸಾಟ ನಡೆಯಲಿದೆ. ಕರಾವಳಿ ಜಿಲ್ಲೆಗಳ 21 ಸ್ಥಾನಗಳ ಪೈಕಿ ಎರಡೂ ಪಕ್ಷಗಳು ಸಮಬಲ ಸಾಧಿಸುವ ಸಾಧ್ಯತೆಗಳಿವೆ ಎಂದು ಈ ಸಮೀಕ್ಷೆಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಬಿಜೆಪಿ : 09-13
ಕಾಂಗ್ರೆಸ್ : 08-12
ಇದೇ ವೇಳೆ, ತೀವ್ರ ಕುತೂಹಲಕಾರಿ ಫಲಿತಾಂಶ ಬೆಂಗಳೂರು ನಗರ ವ್ಯಾಪ್ತಿಯಲ್ಲೂ ಸಿಗಲಿದೆ.
ಬೃಹತ್ ಬೆಂಗಳೂರು ವ್ಯಾಪ್ತಿಯ 32 ಸ್ಥಾನಗಳ ಪೈಕಿ ಬಹುತೇಕ ಕಡೆ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸಲಿದೆಯಂತೆ.
ಕಾಂಗ್ರೆಸ್ : 15-19
ಬಿಜೆಪಿಯ – 11-15
ಜೆಡಿಎಸ್ : 00-03