ಎರಿ: ಅಮೆರಿಕದ ಪೆನ್ಸಿಲ್ವೇನಿಯಾದ ಎರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಮಿನ್ನೇಸೋಟದ ಮಾಲ್ ಆಫ್ ಅಮೆರಿಕಾದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ 18 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಎರಿಯ ಪೆರ್ರಿ ಸ್ಟ್ರೀಟ್‌ನ ಮನೆಯೊಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಹಲವು ಮಂದಿ ಮೃತಪಟ್ಟಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಶಂಕಿತ ವ್ಯಕ್ತಿಯೂ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ದಾಳಿಯ ಉದ್ದೇಶ ಮತ್ತು ಮೃತರ ಗುರುತುಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

ಮಾಲ್‌ನಲ್ಲಿ ದಾಳಿ
ಮಿನ್ನೇಸೋಟದ ಮಾಲ್ ಆಫ್ ಅಮೆರಿಕಾದಲ್ಲಿ 30ರಿಂದ 60 ಮಂದಿಯನ್ನು ಹತ್ಯೆ ಮಾಡಲು ಯೋಜಿಸಿದ್ದ ಆರೋಪವನ್ನು ಶೇಖ್‌ಡೌನ್ ಅಬ್ದುಲ್ಲಾಹಿ ಮೊಹಮ್ಮದ್ ಎದುರಿಸುತ್ತಿದ್ದಾನೆ ಎಂದು ಎಫ್‌ಬಿಐ ತಿಳಿಸಿದೆ.
















































































