ಬೆಂಗಳೂರು: ಪರಿಸರ ಸಂರಕ್ಷಣೆಯತ್ತ ಕೈಗೊಂಡಿರುವ ಪರಿಣಾಮಕಾರಿ ಹಾಗೂ ನವೀನ ಉಪಕ್ರಮಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಗೆ ಪ್ರತಿಷ್ಠಿತ Grow Care India Environment Excellence Award–2025 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಸಾರಿಗೆ ಕ್ಷೇತ್ರದಲ್ಲಿ ನಿಗಮವು ಅನುಷ್ಠಾನಗೊಳಿಸಿರುವ ಪರಿಸರ ಸ್ನೇಹಿ ಯೋಜನೆಗಳು ಮತ್ತು ಅವುಗಳ ಯಶಸ್ವಿ ನಿರ್ವಹಣೆಯನ್ನು ಗುರುತಿಸಿ, Grow Care India Environment Management Awardನ್ನು Gold Categoryಯಲ್ಲಿ ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ.
ಈ ಪ್ರಶಸ್ತಿಯನ್ನು ಜನವರಿ 17, 2026ರಂದು ನವದೆಹಲಿಯ ಏರೋಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ನಿರ್ದೇಶಕಿ ಹಾಗೂ ಜಂಟಿ ಕಾರ್ಯದರ್ಶಿ ಮೃಣಾಲಿನಿ ಶ್ರೀವಾಸ್ತವ ಮತ್ತು ರಕ್ಷಣಾ ಸಚಿವಾಲಯದ ಅಧೀನದ ದೆಹಲಿ ಕ್ಯಾಂಟೋನ್‌ಮೆಂಟ್ ಬೋರ್ಡ್ ಸದಸ್ಯ ರಾಜೇಶ್ ಗೋಯಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಕೆಎಸ್‌ಆರ್‌ಟಿಸಿಯ ಪರವಾಗಿ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ವೆಂಕಟೇಶ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಪರಿಸರ ಜಾಗೃತಿ, ಇಂಧನ ದಕ್ಷತೆ ಮತ್ತು ಹಸಿರು ಸಾರಿಗೆಗೆ ಒತ್ತು ನೀಡುವ ನಿಗಮದ ಪ್ರಯತ್ನಗಳಿಗೆ ಈ ರಾಷ್ಟ್ರೀಯ ಮಟ್ಟದ ಗೌರವ ಮಹತ್ವದ ಸಾಧನೆಯಾಗಿದೆ.





















































