ಮಂಗಳೂರು: ಕರಾವಳಿಯ ಪ್ರತಿಷ್ಠಿತ ವೇದಾಂತ್ ಪದವಿಪೂರ್ವ ಕಾಲೇಜಿನ ಪ್ರವೇಶ ಸಂಬಂಧದ ಮತ್ತೊಂದು ಸುತ್ತಿನ ಪರೀಕ್ಷೆ ಈ ಬಾರಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ.
ಉಚಿತ ವೇದಾಂತ ವಿದ್ಯಾರ್ಥಿವೇತನಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆ ಬೆಳಗಾವಿ, ಬಳ್ಳಾರಿ, ಮಂಗಳೂರು ನಗರಗಳಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು.
ಮಂಗಳೂರಿನಲ್ಲಿ IITIANS ಮತ್ತು Doctors ನಡೆಸುತ್ತಿರುವ ಮೊದಲ ಪಿಯು ಕಾಲೇಜು ಎಂಬ ಖ್ಯಾತಿಗೋಳಾಗಿರುವ ವೇದಾಂತ ಪಿಯು ಕಾಲೇಜು ವತಿಯಿಂದ ಈ ಉಚಿತ ವಿದ್ಯಾರ್ಥಿವೇತನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕರ್ನಾಟಕ State/CBSE/ICSE 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಕೋಲಾರದಲ್ಲಿ ಅಕ್ಟೋಬರ್ 26 ಹಾಗೂ ಕೋಲಾರದಲ್ಲಿ ನವೆಂಬರ್ 9ರಂದು ಈ ಪರೀಕ್ಷೆ ನಡೆಯಲಿದೆ.
26.10.2025 (ಭಾನುವಾರ)
ಕೋಲಾರದ ಶ್ರೀ ಚೆನ್ನೇಗೌಡ ಶಿಕ್ಷಣ ಸಂಸ್ಥೆ (Sri Channegowda Group of institutions NH75 bypass, Near Railway gate, Kogilahalli, Kolar – 563101) ಇಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಪರೀಕ್ಷೆ ನಡೆಯಲಿದೆ.
09.11.2025ರಂದು ಚಿಕ್ಕಬಳ್ಳಾಪುರದ ಸಂತ ಜೋಸೆಫ್ ಕಾನ್ವೆಂಟ್ ಗರ್ಲ್ಸ್ PU ಕಾಲೇಜು ( St. Joseph Convent Girls P U College, Shidlaghatta Road, KEB Colony, Chikkaballapur, Karnataka – 562101) ಇಲ್ಲಿ ಬೆಳಿಗ್ಗೆ 10ರಿಂದ 11 ಗಂಟೆ ವರೆಗೆ ಪರೀಕ್ಷೆ ನಿಗದಿಯಾಗಿದೆ.
ವಿಜ್ಞಾನ ವಿಭಾಗಗಳಿಗೆ 8 ಮತ್ತು 9 ನೇ ತರಗತಿಯ ಗಣಿತ ಮತ್ತು ವಿಜ್ಞಾನದ 60 ನಿಮಿಷಗಳ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಸೀಟು ಹಾಗೂ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಪರೀಕ್ಷೆ ಬರೆಯಲಿಚ್ಚಿಸುವವರು ತಮ್ಮ ಹೆಸರು, ಮೊಬೈಲ್ ನಂಬರ್, ಶಾಲೆಯ ಹೆಸರು, ವಿಳಾಸವನ್ನು 9482662055 ಗೆ ವಾಟ್ಸಾಪ್ ಮುಖಾಂತರ ಕಳುಹಿಸಬಹುದು ಅಥವಾ https://vedantapucollege.com/scholarship-test ವೆಬ್ಸೈಟ್ ಮೂಲಕ ಮಾಹಿತಿ ಪಡೆಯಬಹುದು ಎಂದು ಮಂಗಳೂರು ವೇದಾಂತ ಪಿಯು ಕಾಲೇಜು ನಿರ್ದೇಶಕ ರಮಾನಾಥ ತಿಳಿಸಿದ್ದಾರೆ. /





















































