ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ವಜಾಗೊಂಡಿರುವ ಕೆ.ಎನ್. ರಾಜಣ್ಣ, ತಮ್ಮ ವಜಾ ಹಿಂದೆ “ಅತಿದೊಡ್ಡ ಷಡ್ಯಂತ್ರ” ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
“ನನ್ನ ವಜಾ ಹಿಂದೆ ಪಿತೂರಿ ಇದೆ. ಯಾರು, ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಶೀಘ್ರವೇ ಬಯಲು ಮಾಡುತ್ತೇನೆ,” ಎಂದು ರಾಜಣ್ಣ ಎಚ್ಚರಿಕೆ ನೀಡಿದರು.
“ಇದು ಹೈಕಮಾಂಡ್ ನಿರ್ಧಾರ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ,” ಎಂದೂ ಅವರು ಸ್ಪಷ್ಟಪಡಿಸಿದರು.