ಕಲಬುರಗಿ: ಮಾದಕ ದ್ರವ್ಯ ಮಾರಾಟ ಪ್ರಕರಣದಲ್ಲಿ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಮಹಾರಾಷ್ಟ್ರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ, ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.
“ಗುಲ್ಬರ್ಗ ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ,” ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸಿದೆ. “ಬಂಧಿತ ಲಿಂಗರಾಜ್ ಕಣ್ಣಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರಾಗಿದ್ದಾರೆ” ಎಂದು ಬೊಟ್ಟು ಮಾಡಿದೆ. ಅಷ್ಟೇ ಅಲ್ಲ, ಒಂದು ಕಡೆ ಕಲಬುರಗಿಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ, ಇನ್ನೊಂದು ಕಡೆ ಮಿಸ್ಟರ್ ಖರ್ಗೆ ಅವರ ಆಪ್ತರು ಮಾತ್ರ ಯುವಕರು ಡ್ರಗ್ ಚಟಕ್ಕೆ ದಾಸರಾಗುವಂತೆ ಮಾಡುತ್ತಿದ್ದಾರೆಯೇ? ನಿಮ್ಮ ಆಪ್ತ ನಡೆಸುತ್ತಿರುವ ಡ್ರಗ್ ದಂಧೆಯಲ್ಲಿ ನಿಮ್ಮ ಪಾಲೆಷ್ಟು?’ ಎಂದು ಬಿಜೆಪಿ ಪ್ರಶ್ನಿಸಿದೆ.
ಒಂದು ಕಡೆ ಕಲಬುರಗಿಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ, ಇನ್ನೊಂದು ಕಡೆ ಮಿಸ್ಟರ್ ಖರ್ಗೆ ಅವರ ಆಪ್ತರು ಮಾತ್ರ ಯುವಕರು ಡ್ರಗ್ ಚಟಕ್ಕೆ ದಾಸರಾಗುವಂತೆ ಮಾಡುತ್ತಿದ್ದಾರೆಯೇ? ನಿಮ್ಮ ಆಪ್ತ ನಡೆಸುತ್ತಿರುವ ಡ್ರಗ್ ದಂಧೆಯಲ್ಲಿ ನಿಮ್ಮ ಪಾಲೆಷ್ಟು?#drugdealerKharge #CongressFailsKarnataka pic.twitter.com/N34uwZnmTl
— BJP Karnataka (@BJP4Karnataka) July 14, 2025