ಮುಂಬೈ: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ ಸಂಭವಿಸಿದ್ದು, 10ಕ್ಕೂ ಹೆಚ್ಚು ಮಂದಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ.
ಪ್ರವಾಸಿಗರಿದ್ದ ದೋಣಿಗೆ ಸ್ಪೀಡ್‌ಬೋಟ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮುಂಬಯಿಯಲ್ಲಿರುವ ಗೇಟ್‌ವೇ ಆಫ್ ಇಂಡಿಯಾದಿಂದ ಪ್ರವಾಸಿಗರನ್ನು ಎಲಿಫೆಂಟಾ ದ್ವೀಪಕ್ಕೆ ಕರೆದೊಯ್ಯುತ್ತಿದ್ದ ದೋಣಿ ಅವಘಡಕ್ಕೀಡಾಗಿದೆ. ಸುದ್ದಿ ತಿಳಿದು ಧಾವಿಸಿದ ರಕ್ಷಣಾ ತಂಡ ನೂರಕ್ಕೂ ಹೆಚ್ಚುಮಂದಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಕಾಪಡೆ, ಮೆರೈನ್ ಪೊಲೀಸ್, ಕರಾವಳಿ ಕಾವಲುಪಡೆ ಯೋಧರು ಪ್ರವಾಸಿಗರನ್ನು ರಕ್ಷಿಸಲು ಸುದೀರ್ಘ ಕಾರ್ಯಾಚರಣೆ ನಡೆಸಿದ್ದಾರೆ.























































