ಬೆಂಗಳೂರು: ಕರಾವಳಿ ಜಿಲ್ಲೆಯ ಜನರ ಧ್ವನಿಯಾಗಿ ಕುಂದಾಪುರ ಶಾಸಕ ಕಿರಣ್ ಕೋಡ್ಗಿ ಅವರು ಧ್ವನಿ ಎತ್ತಿದ ನಡೆ ಗಮನಸೆಳೆದಿದೆ.
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 5 ಪಶುವೈದ್ಯರು ಹಾಗೂ 25 ಪಶುಪರಿವೀಕ್ಷಕರು ಸಹಿತ 40 ಹುದ್ದೆಗಳು ಖಾಲಿ ಇವೆ ಎಂದು ವಿಧಾನಸಭೆಯಲ್ಲಿ ಸೋಮವಾರ ಪ್ರಸ್ತಾಪಿಸಿದರು. ಕಳೆದ 3 ವಿಧಾನಸಭಾ ಅಧಿವೇಶನಗಳಲ್ಲೂ ಸಚಿವರಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಈ ವರೆಗೆ ಖಾಲಿ ಹುದ್ದೆಗೆ ಅಧಿಕಾರಿಗಳ ನಿಯುಕ್ತಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ವಿಳಂಬ ಕುರಿತು ಕುಂದಾಪುರ ಶಾಸಕರಾದ ಶ್ರೀ @KiranKodgiBjp ಅವರು ಸಚಿವರಿಗೆ ಕೇಳಿದ ಪ್ರಶ್ನೆಗೆ ಸದನದಲ್ಲಿ ಧ್ವನಿಗೂಡಿಸಲಾಯಿತು. pic.twitter.com/bKlrgXtKP0
— Gururaj Gantihole (@gantihole) July 15, 2024
ಇದಕ್ಕೆ ಉತ್ತರಿಸಿದ ಸಚಿವರು, ತುಂಬಾ ಹುದ್ದೆಗಳು ಖಾಲಿ ಇವೆ, ಹಂತ ಹಂತವಾಗಿ ಭರ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಪ್ರತೀ ಬಾರಿ ನೇಮಕಾತಿ ಆಗುತ್ತದೆಯಾದರೂ ಕರಾವಳಿಗೆ ನಿಯುಕ್ತಿ ಮಾಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಮುಂಚಿತವಾಗಿಯೇ ನೆನಪಿಸುತ್ತಿದೇವೆ. ನೇಮಕ ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಸದನದ ಗಮನಸೆಳೆದರು.
ಸ್ಪೀಕರ್ ಯು.ಟಿ.ಖಾದರ್ ಕೂಡಾ ಕರಾವಳಿಯ ಶಾಸಕರ ನೋವಿಗೆ ಮರುಗಿದರು. ಹೀಗಾದರೆ ಇದಕ್ಕೆ ಪರಿಹಾರವೇನು ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಶ್ನಿಸಿದ ಪ್ರಸಂಗವೂ ನಡೆಯಿತು. ಸರ್ಕಾರ ಮಾಡುವುದೇ ಇಲ್ಲ, ಪ್ರತೀ ಬಾರಿ ಅಪಾಯಿಂಟ್ ಆದಾಗಲೂ ಕರಾವಳಿಗೆ ಹಂಚಿಕೆ ಮಾಡುವುದಿಲ್ಲ ಎಂದು ಶಾಸಕರು ಪರಿಸ್ಥಿತಿಯತ್ತ ಬೊಟ್ಟು ಮಾಡಿದರು.