ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಆರು ಮಂದಿ ಉಗ್ರರನ್ನು ಭದ್ತಾಪಡೆ ಹೊಡೆದುರುಳಿಸಿದೆ.
ಕುಲ್ಗಾಮ್ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಎರಡು ಕಡೆ ಸೇನಾ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಆರು ಉಗ್ರರನ್ನು ಸೇನಾಪಡೆ ಹತ್ಯೆ ಮಾಡಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಮೊದರ್ಗಾಮ್ ಮತ್ತು ಚಿನ್ನಿಗಮ್ ಪ್ರದೇಶದಲ್ಲಿ ನಿನ್ನೆಯಿಂದಲೇ ಕಾರ್ಯಾಚರಣೆ ನಡೆದಿದೆ. ಉಗ್ರತ ದಾಳಿ ಸಂಚನ್ನು ವಿಫಲಗೊಳಿಸಲು ಸೇನೆ ಎರಡು ದಿನಗಳಿಂದ ಈ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಯೋಧರೂ ಹುತಾತ್ಮರಾಗಿದ್ದಾರೆ.



















































