ಬೆಂಗಳೂರು: ಶ್ರದ್ಧಾ ಕೇಂದ್ರಗಳಿಗೆ ತೆರಳುವ ಯಾತ್ರಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮುಜರಾಯಿ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಹೆ.ಇಟ್ಟಿದ್ದು, ಪುಣ್ಯಕ್ಷೇತ್ರಗಳ ಯಾತ್ರೆಗಳಿಗೆ ಸರ್ಕಾರದ ಸಹಾಯಧನ ಪಾವತಿ ವ್ಯವಸ್ಥೆಯಲ್ಲಿ ಸರಳೀಕರಣ ಮಾಡಲಾಗಿದೆ.
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯಿಂದ ಕೈಗೊಳ್ಳುವ ಚಾರ್ ಧಾಮ್ ಯಾತ್ರೆ ರೂ.30,000, ಕೈಲಾಸ ಮಾನಸ ಸರೋವರ ಯಾತ್ರೆ ರೂ.20,000 ಮತ್ತು ಕಾಶಿ ಯಾತ್ರೆಯಲ್ಲಿ ಗಯಾ ಸೇರಿಸಿ ರೂ.5,000 (ಒಟ್ಟು 30000 ಯಾತ್ರಾರ್ಥಿಗಳಿಗೆ) ಹಾಗೂ ರೈಲು ಮೂಲಕ ಯಾತ್ರೆ ಕೈಗೊಳುವ ಯಾತ್ರಾರ್ಥಿಗಳಿಗೆ ರೂ.5000 ದಿಂದ ರೂ 7500ಕ್ಕೆ ಸಹಾಯಧನ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಪಾವತಿಸುವ ಸಹಾಯಧನ ಪಡೆಯಲು
ಹತ್ತು ಹಲವು ನಿಭಂದನೆ ಹಾಗೂ ಕಚೇರಿಗಳಿಗೆ ತಡಕಾಡುವ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ.
ಸಹಾಯಧನ ಪಾವತಿಸುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ಮೊಬೈಲ್ ಆಪ್ ಮೂಲಕ ನೋಂದಣಿ ಮಾಡಿಕೊಂಡು, ಜಿಯೋಲೊಕೇಶನ್ (Geo Location) ಮಾಹಿತಿಯನ್ನು ಪೂರ್ಣಗೊಳಿಸಿ, ಸೆಲ್ಸಿ ಒಳಗೊಂಡಿರುವ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ಯಾತ್ರಾ ಸ್ಥಳದಲ್ಲಿ ಉಪಸ್ಥಿತಿಯನ್ನು ಖಚಿತಪಡಿಸಿ ಮತ್ತು ಫೋಟೋದ ಹಿನ್ನೆಲೆಯಲ್ಲಿ ದೇವಾಲಯದ ಪ್ರಮುಖ ಸ್ಥಳವನ್ನು ಕಾಣುವಂತೆ ಅಪ್‌ಲೋಡ್ ಮಾಡಬೇಕು. (ದೇವಾಲಯದ 5 ಕಿಲೋ ಮೀಟರ್ ಒಳಗೆ). ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.