ನವದೆಹಲಿ: ಬಿರುಗಾಳಿ ಮಳೆಯ ಹೊಡೆತಕ್ಕೆ ಸಿಲುಕಿ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು ಅವಘಡ ಸಂಭವಿಸಿದೆ. ಶುಕ್ರವಾರ ನಸುಕಿನ ಜಾವ ಟರ್ಮಿನಲ್-1 ನಿರ್ಗಮನ ಗೇಟ್‌ನಲ್ಲಿನ ಮೇಲ್ಛಾವಣಿ ಭಾಗ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಒಬ್ಬ ಮೃತಪಟ್ಟಿದ್ದು 7 ಮಂದಿ ಗಾಯಗೊಂಡಿದ್ದಾರೆ.
#WATCH | 4 people were injured after a roof collapsed at the Terminal-1 of Delhi airport.
(Video source – Delhi Fire Service) pic.twitter.com/Uc0qTNnMKe
— ANI (@ANI) June 28, 2024
ಈ ಅವಘಡದಲ್ಲಿ ಟ್ಯಾಕ್ಸಿ ಮತ್ತು ಕಾರುಗಳು ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿವೆ ಎಂದು ,ಮೂಲಗಳು ತಿಳಿಸಿವೆ. ಈ ದುರ್ಘಟನೆಯ ನಂತರ ಸುರಕ್ಷತಾ ದೃಷ್ಟಿಯಿಂದ ಟರ್ಮಿನಲ್-1ರಲ್ಲಿನ ಎಲ್ಲಾ ಚೆಕ್-ಇನ್ ಮತ್ತು ನಿರ್ಗಮನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.




























































