ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ದೇಶದೆಲ್ಲೆಡೆ ಶುಕ್ರವಾರ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ಜನ ಮುಗಿಬಿದ್ದರು. ಯೋಗ ದಿನಾಚರಣೆಯಲ್ಲಿ ಭಾಗಿಯಾದ ಜನಸಾಮಾನ್ಯರ ಜೊತೆ ಪ್ರಧಾನಿ ಮೋದಿಯವರೂ ಸಂತಸದಿಂದ ಭಾಗಿಯಾದರು. ಮಹಿಳೆಯರು ಮೋದಿ ಜೊತೆ ಸೆಲ್ಫೀ ಫೋಟೋ ತೆಗೆದು ಸಂಭ್ರಮಿಸಿದರು. ಮೋದಿಯವರೂ ಫೋಟೋ ಸೆರೆಹಿಡಿದ ಸನ್ನಿವೇಶವೂ ಗಮನಸೆಳೆಯಿತು.
Post Yoga selfies in Srinagar! Unparalled vibrancy here, at the Dal Lake. pic.twitter.com/G9yxoLUkpX
— Narendra Modi (@narendramodi) June 21, 2024