ನವದೆಹಲಿ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಅಂತಿಮ ತಯಾರಿ ನಡೆದಿದ್ದು, ಶಾಂತಿಯುತ ಚುನಾವಣಾಗಾಗಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ರಾಜ್ಯಗಳಲ್ಲಿ 2ನೇ ಹಂತದ ಚುನಾವಣೆ:
- ಕೇರಳದ 20 ಕ್ಷೇತ್ರಗಳು,
- ಕರ್ನಾಟಕದ 14 ಕ್ಷೇತ್ರಗಳು.
- ರಾಜಸ್ಥಾನದ 13 ಕ್ಷೇತ್ರಗಳು,
- ಉತ್ತರ ಪ್ರದೇಶದ 8 ಕ್ಷೇತ್ರಗಳು,
- ಮಹಾರಾಷ್ಟ್ರದ 8 ಕ್ಷೇತ್ರಗಳು,
- ಮಧ್ಯಪ್ರದೇಶದ 7 ಕ್ಷೇತ್ರಗಳು,
- ಅಸ್ಸಾಂನ 5 ಕ್ಷೇತ್ರಗಳು,
- ಬಿಹಾರದ 5 ಕ್ಷೇತ್ರಗಳು,
- ಛತ್ತೀಸ್ಗಢದ 3 ಕ್ಷೇತ್ರಗಳು,
- ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
- ಮಣಿಪುರದ 1 ಕ್ಷೇತ್ರ,
- ತ್ರಿಪುರಾದ 1 ಕ್ಷೇತ್ರ,
- ಜಮ್ಮು ಕಾಶ್ಮೀರದ 1 ಕ್ಷೇತ್ರ