ಬೆಂಗಳೂರು: ರಾಜಧಾನಿ ಬೆಂಗಳೂರು ಬೆಚ್ಚಿ ಬೀಳಿಸುವ ಘಟನೆಗೆ ಸಾಕ್ಷಿಯಾಯಿತು. ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿವಾಸವಾಗಿದ್ದ ಉಡುಪಿ ಜಿಲ್ಲೆ ಅಂಬಲಪಾಡಿ ಮೂಲದ ಮಹಿಳೆ ತನ್ನ ಮಕ್ಕಳೊಂದಿಗೆ ಸಾವಿಗೆ ಶರಣಾಗಿದೆ. ಮೃತರನ್ನು 58 ವರ್ಷದ ಸುಕನ್ಯ, ಮಕ್ಕಳಾದ ನಿಖಿತ್, ನಿಶ್ಚಿತ ಎಂದು ಗುರುತಿಸಲಾಗಿದೆ.
ಬ್ಯಾಂಕ್ ಸಿಬ್ಬಂದಿ ಎನ್ನಲಾದ ವ್ಯಕ್ತಿಗಳು ಮಂಗಳವಾರ ಸಾಲವಸೂಲಿ ನೆಪದಲ್ಲಿ ಮನೆಗೆ ಭೇಟಿ ನೀಡಿದ್ದಾರೆನ್ನಲಾಗಿದ್ದು, ಅದರ ಬೆನ್ನಾಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಜೆ.ಪಿ.ನಗರ ಠಾಣೆಯ ಪೊಲೀಸರು ಪರಿಶೆಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.