ಬೆಂಗಳೂರು: ದೇಶದ ರೈತರ ಹಿತರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ಪಂಜಾಬ್, ಹರಿಯಾಣ ರೈತರ ಮೇಲೆ ಪೊಲೀಸ್ ಗೋಲಿಬಾರ್ ಮಾಡಿ ರೈತ ಶುಭಕರಣ್ ಸಿಂಗ್ ಪ್ರಾಣ ತೆಗೆದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ದಿನ ಆಚರಿಸಲಾಯಿತು.
ಕೇಂದ್ರ ಸರ್ಕಾರ ರೈತ ಹೋರಾಟವನ್ನು ಹತ್ತಿಕ್ಕುವ ಬದಲು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಪಂಜಾಬ್ ,ಹರಿಯಾಣ ದೆಹಲಿ ರೈತ ಹೋರಾಟ ಬೆಂಬಲಿಸಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು, ರೈತರ ಸಂಪೂರ್ಣ ಕೃಷಿ ಸಾಲ ಮನ್ನಕ್ಕಾಗಿ, ಸಂಕಷ್ಟ ಕಾಲದಲ್ಲೂ ಬ್ಯಾಂಕುಗಳು ರೈತರಿಗೆ ಸಾಲ ವಸುಲಿಗಾಗಿ ನೋಟಿಸ್ ನೀಡುವುದನ್ನು ತಡೆಯಬೇಕು, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಬೆಳೆ ವಿಮೆ ಪದ್ಧತಿ ಬದಲಾಗಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿಗೆ ಬರಬೇಕು, ರಾಜ್ಯದಲ್ಲಿ ಬರಗಾಲ ಕಾಡುತ್ತಿದೆ ಕುಡಿಯುವ ನೀರು, ದನಕರುಗಳಿಗೆ ಮೇವು ಸಿಗುತ್ತಿಲ್ಲ ಈ ಬಗ್ಗೆ ಸಮರೋಪಾದಿಯಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಯುವಕರು ಆನ್ಲೈನ್ ಜೂಜಾಟ ರಮ್ಮಿ ಇತರೆ ಗೇಮ್ ಗಳಿಗೆ ತಲೆಬಾಗಿ ದಿಕ್ಕು ತಪ್ಪುತ್ತಿದ್ದಾರೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ತಕ್ಷಣವೇ ಆನ್ಲೈನ್ ಜುಜಾಟ ಹ್ಯಾಪ್ ಅನುಮತಿ ರದ್ದುಗೊಳಿಸಬೇಕು, ಕರ್ನಾಟಕ ರಾಜ್ಯದ ರಾಜ್ಯಪಾಲರುದ ಈ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆದ ಬೃಹತ್ ಪಂಜಿನ ಪ್ರತಿಭಟನೆಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ರಾಮನಗರ ,ಮೈಸೂರು, ಚಾಮರಾಜನಗರ, ಜಿಲ್ಲೆಗಳ ರೈತರು ಭಾಗಿಯಾದರು. ಈ ಪ್ರತಿಭಟನೆಯ ನೇತೃತ್ವ ವಹಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್, ಕೇಂದ್ರ ಸರ್ಕಾರ ರೈತರ ಹೋರಾಟವನ್ನ ನಿರ್ಲಕ್ಷ್ಯ ಮಾಡಿದರೆ ದೇಶಾದ್ಯಂತ ಯುವ ರೈತ ಸುಭಕರಣ ಸಿಂಗ್ ಕೊಲೆ ಮಾಡಿದ ಸರ್ಕಾರ ರೈತ ವಿರೋಧಿ ಎಂಬುದನ್ನ ತಿಳಿಸಲು ರೈತ ಜಾಗೃತಿ ಯಾತ್ರೆಯನ್ನು ನಡೆಸಿ ರೈತರಿಗೆ ಜಾಗೃತಿ ಮೂಡಿಸಲಾಗುವುದು ಎಂದರು. ರೈತ ಮುಖಂಡರ ಜೊತೆ 4 ಸಭೆಗಳನ್ನು ನಡೆಸಿ ಯಾವುದೇ ನಿರ್ಧಾರ ಕೈಗೊಳ್ಳದೆ ಪಲಾಯನವಾದ ಮಾಡಿದೆ ರೈತರನ್ನ ಗುಲಾಮರಂತೆ ನಡೆಸಿಕೊಳ್ಳುತ್ತಿದೆ ಎಂದು ಜನರಿಗೆ ತಿಳಿಸಲಾಗುವುದು ಎಂದರು
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ವಿ ಆರ್ ನಾರಾಯಣರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಕನ್ನಡ ಚಳುವಳಿ ಗುರುದೇವ್ ನಾರಾಯಣ್ ಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜೇಶ್, ರೈತ ಸಂಘಟನೆಗಳ ಪ್ರಮುಖರಾದ ಕಮಲಮ್ಮ, ಬರಡನಪುರ ನಾಗರಾಜ್, ಗಜೇಂದ್ರ, ಸಹಿತ ಅನೇಕರು ಭಾಗಿಯಾಗಿದ್ದರು.