ನವದೆಹಲಿ: ಮಹಾರಾಷ್ಟ್ರದ ಪ್ರಬಲ ರಾಜಕೀಯ ಶಕ್ತಿಯಾಗಿರುವ ಎನ್‌ಸಿಪಿ ಇದೀಗ ಅಜಿತ್ ಸೇನೆಯಾಗಿ ಗುರುತಾಗಿದೆ. ಶರದ್ ಪವಾರ್ ಹಾಗೂ ಅಜಿತ್ ನಡುವಿನ ಕಾನೂನು ಸಮರದಲ್ಲಿ ಶರದ್ ಪವಾರ್ ಗುಂಪಿಗೆ ಹಿನ್ನಡೆಯಾಗಿದೆ. ಎನ್‌ಸಿಪಿ ಪಕ್ಷವು ಅಜಿತ್ ಪವಾರ್ ಅವರ ಬಣಕ್ಕೆ ಸೇರಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಚುನಾವಣಾ ಆಯೋಗದಲ್ಲಿ ಈ ಎರಡು ಗುಂಪುಗಳ ನಡುವೆ ಹೋರಾಟ ನಡೆದಿದೆ. ಕಳೆದ ವರ್ಷ, ಅಜಿತ್ ಬೆಂಬಲಿಗರು ಬಂಡಾಯವೆಡ್ಡಿದ್ದಾರೆ. ಆ ಸಂದರ್ಭದಲ್ಲಿ ಎನ್‌ಸಿಪಿ ಎರಡು ಗುಂಪುಗಳಾಗಿ ಇಬ್ಬಾಗವಾಗಿಅಜಿತ್ ಪವಾರ್ ಅವರು ಅನೇಕ ಶಾಸಕರ ಜೊತೆ ಶಿಂಧೆ ಸರ್ಕಾರವನ್ನು ಬೆಂಬಲಿಸಿದರು. ಶಿಂದೆ ಸರ್ಕಾರದಲ್ಲಿ ಅಜಿತ್ ಉಪ ಮುಖ್ಯಮಂತ್ರಿಯೂ ಆದರು. ಅಷ್ಟೇ ಅಲ್ಲ, ಎನ್‌ಸಿಪಿ ಪಕ್ಷವು ತಮಗೆ ಸೇರಿದ್ದು ಎಂದು ಅಜಿತ್ ಪ್ರತಿಪಾದಿಸಿದ್ದರು. ಶರದ್ ಪವಾರ್ ಕೂಡ ಎನ್‌ಸಿಪಿ ತಮ್ಮದೇ ಎಂದು ವಾದಿಸಿದ್ದರು. ಇದೀಗ ಚುನಾವಣಾ ಆಯೋಗವು ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಎನ್‌ಸಿಪಿ ಪಕ್ಷದ ಹೆಸರು ಮತ್ತು ಚಿಹ್ನೆ ಅಜಿತ್ ಪವಾರ್ ಬಣಕ್ಕೆ ಸೇರಿದ್ದಾಗಿದೆ ಎಂದು ಘೋಷಿಸಿದೆ.






















































