ಲಕ್ನೋ: ಸ್ವಿಫ್ಟ್ ಕಾರು ಚರಂಡಿಗೆ ಉರುಳಿಬಿದ್ದು ಸಂಭವಿಸಿದ ಅಪಘಾತವೊಂದು 6 ಮಂದಿಯನ್ನು ಬಲಿತೆಗೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಿವಾಹ ಸಮಾರಂಭದ ಭಾಗವಾಗಿ ಭಾನುವಾರ ರಾತ್ರಿ ಏರ್ಪಾಡಾಗಿದ್ದ ತಿಲಕ ಕಾರ್ಯಕ್ರಮಕ್ಕೆ ತೆರಳಿದ್ದ ಮಂದಿ ಕಾರಿನಲ್ಲಿ ತಮ್ಮ ಮನೆಗೆ ವಾಪಾಸಾಗುತ್ತಿದ್ದರು. ಆ ವೇಳೆ ಜಗನ್ನಾಥಪುರ ಗ್ರಾಮದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಜಗನ್ನಾಥಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.