ಬೆಂಗಳೂರು: ರಾಜ್ಯದಲ್ಲಿ ಟ್ಯಾಕ್ಸಿಗಳು ದುಬಾರಿ ದರ ವಸೂಲಿ ಮಾಡುತ್ತಿದ್ದಾರೆಂಬ ಆರೋಪಗಳಿಗೆ ಬ್ರೇಕ್ ಹಾಕುವ ಸಂಬಂಧ ಸಾರಿಗೆ ಇಲಾಖೆ ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದೆ. ಸಿಟಿ ಟ್ಯಾಕ್ಸಿ, ಅಗ್ರಿಗೇಟರ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನಗಳು ಸೇರಿದಂತೆ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ಮತ್ತು ಸಾಗಾಣಿಕ ದರವನ್ನು ರಾಜ್ಯಾದ್ಯಂತ ಏಕರೂಪಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.
ದರ ಪರಿಷ್ಕರಣೆಯ ಜೊತೆ ಸಾಮಾನ್ಯ ನಿಯಮಗಳನ್ನೂ ಸಾರಿಗೆ ಇಲಾಖೆ ಪ್ರಕಟಿಸಿದೆ. ಪ್ರಯಾಣಿಕರ 120 ಕೆಜಿ ವರೆಗಿನ ಲಗೇಜುಗಳಿಗೆ ವಿನಾಯಿತಿ ಇರುತ್ತದೆ. ಕಾಯುವಿಕೆ ಶುಲ್ಕ ಮೊದಲ 5 ನಿಮಿಷ ಕಾಯುವಿಕೆಗೆ ಉಚಿತ. ಜಿಎಸ್‌ಟಿ, ಟೋಲ್ ಪಾವತಿ ವೆಚ್ಚ ಪ್ರಯಾಣಿಕರ ಹೊಣೆ. ರಾತ್ರಿ ನಂತರ ಬೆಳಗ್ಗಿನ ಜಾವ 6 ಗಂಟೆ ವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ 10% ಹೆಚ್ಚುವರಿ ದರ ವಿಧಿಸಲು ಅವಕಾಶ ಇದೆ.
ಪರಿಷ್ಕೃತ ಟ್ಯಾಕ್ಸಿ ದರ ಹೀಗಿದೆ:
-
10 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 100 ರೂ. ನಂತರ ಪ್ರತಿ ಕಿಮೀಗೆ ಹೆಚ್ಚುವರಿ 24 ರೂ.
-
10 ಲಕ್ಷದಿಂದ 15 ಲಕ್ಷ ರೂ.ವರೆಗಿನ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 115 ರೂ. ನಂತರ ಪ್ರತಿ 1 ಕಿಮೀಗೆ ಹೆಚ್ಚುವರಿ 28 ರೂ.
-
15 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 130 ರೂ. ನಂತರ ಪ್ರತಿ ಕಿಲೋ ಮೀಟರ್‌ಗೆ ಹೆಚ್ಚುವರಿ 32 ರೂ.




























































