ಟೋಕಿಯೋ: ಜಪಾನ್ ದೇಶ ಮತ್ತೊಮ್ಮೆ ಭೂಕಂಪಕ್ಕೆ ತುತ್ತಾಗಿದೆ. ಇಂದು ಬೆಳಗ್ಗೆ ಈಶಾನ್ಯ ಜಪಾನ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದೇ ವೇಳೆ, ಜಪಾನ್ ಕರಾವಳಿಗೆ ಸುನಾಮಿಯ ಅಲೆಗಳು ಅಪ್ಪಳಿಸಿವೆ ಎನ್ನಲಾಗಿದೆ.
ಸೋಮವಾರ ಜಪಾನ್ನಲ್ಲಿ ಕೇಂದ್ರ ಭಾಗದ ಪ್ರದೇಶದಲ್ಲಿ ಪ್ರಬಲ ಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದೆ. ಇದರ ಬೆನ್ಬಾಲ್ಲೇ ಸುನಾಮಿ ಆತಂಕವೂ ಜಪಾನ್ ಕರಾವಳಿ ಜನರನ್ನು ಕಾಡಿದೆ. ಜಪಾನ್ ಇಶಿಕಾವಾದ ವಾಜಿಮಾ ನಗರದ ಕರಾವಳಿ ಭಾಗದಲ್ಲಿ ದೈತ್ಯ ಅಲೆಗಳು ಕಿನಾರೆಗೆ ಅಪ್ಪಳಿಸಿವೆ. ಸುನಾಮಿ ಮುನ್ಸೂಚನೆ ಹಿನ್ನೆಲೆಯಲ್ಲಿ ಜಪಾನ್ನ ಆಡಳಿತ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ.