ಬೆಂಗಳೂರು: ಕಾವೇರಿ ನೀರಿನ ಹೋರಾಟ ಸಂಬಂಧ ಬೆಂಗಳೂರು ಬಂದ್ ಯಶಸ್ವಿಯಾಗಿದೆ ಎಂದು ಹೋರಾಟದ ರೂವಾರಿಯಾಗಿರುವ ಜಲ ಸಂರಕ್ಷಣಾ ಸಮಿತಿ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಬೆಂಗಳೂರು ಬಂದ್‌ಗೆ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಬೆಂಗಳೂರು ನಗರದ ನಾಗರೀಕರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರು ಬಂದ್ ಸಂಪೂರ್ಣ ಶಾಂತಿಯುತ ಬಂದ್ ಯಶಸ್ವಿಯಾಗಿದೆ. ಇದು ಜನರ ಆಕ್ರೋಸದ ಎಚ್ಚರಿಕೆಯಾಗಿದೆ ಯಾವುದೇ ಬಲತ್ಕಾರವಿಲ್ಲದೆ ಜನರೇ ಪ್ರೀತಿಯಿಂದ ಬಂದ್ ಮಾಡಿ ಸಹಕಾರ ನೀಡಿದ್ದಾರೆ ಇದು ಜನತಂತ್ರದ ಜಯ ಎಂದಿರುವ ಕುರುಬೂರು ಶಾಂತಕುಮಾರ್. ಶಾಂತಿಯುತ ಬಂದ ನಡೆಯಲು ಸಹಕರಿಸಿದ 200 ಹೆಚ್ಚು ಸಂಘಟನೆಗಳ ಮುಖಂಡರಿಗೆ ಬೆಂಗಳೂರು ನಗರದ ಜನತೆಗೆ ಬಂದ್ ಬೆಂಬಲಿಸಿದ ಬಿಜೆಪಿ ,ಜನತಾದಳ, ಅಮ್ ಆದ್ಮಿ , ಪಕ್ಷಗಳಿಗೆ ಹಾಗೂ ಮಾಧ್ಯಮಗಳಿಗೆ ಕರ್ನಾಟಕ ಜಲ ಸಂರಕ್ಷಣ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.



























































