ಪುತೂರು: ಹಿಂದೂ ಸಂಘಟನೆಗಳ ಶಕ್ತಿಕೇಂದ್ರ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಇಂದು ಕೇಸರಿ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರಿನಲ್ಲಿ ಕಮಲ ಪಕ್ಷಕ್ಕೆ ಸವಾಲೆಂಬಂತೆ ಬಂಡಾಯ ಅಭ್ಯರ್ಥಿಯಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ನಾಮಪತ್ರ ಸಲ್ಲಿಸಿದರು.
ಪುತ್ತೂರಿನ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಸಾಗಿದ ಅರುಣ್ ಕುಮಾರ್ ಪುತ್ತಿಲ ಅವರು ಶಕ್ತಿ ಪ್ರದರ್ಶನ ಮೂಲಕ ಬಿಜೆಪಿ ನಾಯಕರಿಗೆ ಸೆಡ್ಟುಹೊಡೆದರು. ಭಾರೀ ಜನಸಾಗರವೇ ಈ ಮೆರವಣಿಗೆಗೆ ಹರಿದು ಬಂತು.
Saffron wave in Puttur! But this is not the wave of the #BJP party 😁
Arun kumar Puttila is not a BJP candidate #PuttilaForPuttur pic.twitter.com/wdEIZhdHUd— legend of Tulunad (@OfTulunad) April 17, 2023
ಈವರೆಗೂ ಶಾಸಕರಾಗಿರುವ ಸಂಜೀವ ಮಠಂದೂರು ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಹಾಗಾಗಿ ಸ್ಥಳೀಯ ಕಾರ್ಯಕರ್ತರ ಆಕ್ಷೇಪದ ನಡುವೆಯೂ ನಳಿನ್ ಕುಮಾರ್ ಕಟೀಲ್ ಅವರು ಸಂಜೀವ ಮಠಂದೂರು ಅವರಿಗೆ ಟಿಕೆಟ್ ನೀಡಲು ತೀವ್ರ ಕಸರತ್ತು ನಡೆಸುತ್ತಿದ್ದರು. ಇದೇ ವೇಳೆ, ಮಠಂದೂರು ಅವರಿಗೆ ಟಿಕೆಟ್ ನೀಡಲೇಬಾರದು ಎಂದು ಪಟ್ಟು ಹಿಡಿದಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು, ತಾವೇ ಟಿಕೆಟ್ ಪಡೆಯಲು ಕಸರತ್ತು ನಡೆಸಿದರು. ಆದರೆ ಅಂತಿಮವಾಗಿ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಮಠಂದೂರಿಗೂ ಇಲ್ಲ, ಪುತ್ತಿಲ ಅವರಿಗೂ ಸಿಗಲಿಲ್ಲ.
ಭಾರೀ ಸಂಖ್ಯೆಯ ಅಭಿಮಾನಿಗಳು ಮತ್ತು ಹಿಂದೂ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ ಅರುಣ್ ಕುಮಾರ್ ಪುತ್ತಿಲ…!#Puttila_For_Puttur pic.twitter.com/jIJvshYqKd
— VINAY PRABHU (@VinayaPrabhu10) April 17, 2023
ಬಿಜೆಪಿ ವರಿಷ್ಠರ ವಿರುದ್ದ ಪುತ್ತೂರಿನ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದು, ಕಾರ್ಯಕರ್ತರ ಒತ್ತಡಕ್ಕೆ ಮಣಿದ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮೈಲುಗಟ್ಟಲೆ ದೂರ ಮೆರವಣಿಗೆ ಸಾಗಿದ ದೃಶ್ಯ ಪುತ್ತೂರು ಪಟ್ಟಣದಲ್ಲಿ ‘ಕೇಸರಿ ಪ್ರವಾಹ’ ಹರಿದಂತೆ ಭಾಸವಾಯಿತು. ಇದು ಬಿಜೆಪಿಗರಿಂದಲೇ ರಾಜ್ಯ ಬಿಜೆಪಿ ನಾಯಕರ ವಿರುದ್ದದ ಬಂಡಾಯದ ಶಕ್ತಿಪ್ರದರ್ಶನ ಎಂಬಂತಿತ್ತು.
ಹಿಂದೂತ್ವ – ಅಭಿವೃದ್ಧಿ – ಯುವ ನಾಯಕತ್ವವನ್ನು ಬಯಸುತ್ತಿದೆ ಪುತ್ತೂರು
ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಸಿದ ಸಂದರ್ಭ#Puttila4Puttur #Puttur @JPNadda | @annamalai_k | @AmitShah | @narendramodi |@DattaHosabale | @MUKUNDAckpura pic.twitter.com/5zhZOwhEJp
— VoiceOfPuttur (@VoiceOfPuttur) April 17, 2023



























































