ಕೊಪ್ಪಳ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಜೆಡಿಎಸ್, ಈ ಬಾರಿ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಸಾರಿದೆ.
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸಂಪೂರ್ಣ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ 1 ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡುವೆ, ಬಹುಮತ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ಬಳಿ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಮ್ಮ ಪಕ್ಷದ ಸರ್ಕಾರ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಾವಿರಾರು ರೈತರ, ಮಹಿಳೆಯರು ಕೋರಿಕೆಯಂತೆ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಹೆಚ್ಡಿಕೆ ಭರವಸೆಯ ಮಳೆ:
-
ಪಂಚ ರತ್ನ ಯೋಜನೆಯಡಿ ಪ್ರತಿ ಗ್ರಾಪಂನಲ್ಲಿ ಆಧುನಿಕ ಶಾಲೆ ಕಟ್ಟಲಾಗುವುದು.
-
ಪ್ರತಿ ಗ್ರಾಪಂನಲ್ಲಿ 30 ಬೆಡ್ ಆಸ್ಪತ್ರೆ ನಿರ್ಮಿಸಲಾಗುವುದು.
-
ಹೆಚ್ಚಿನ ಚಿಕಿತ್ಸೆ ಪಡೆಯುವ ಕುಟುಂಬಕ್ಕೆ 30-35 ಲಕ್ಷ ಮೇಲ್ಪಟ್ಟ ಖಾಯಿಲೆಗೆ ಸರ್ಕಾರವೇ ಭರಿಸುವುದು.
-
ಬಿತ್ತನೆ ಬೀಜಕ್ಕೆ, ಗೊಬ್ಬರ ಖರೀದಿಗೆ ಎಕರೆಗೆ 10 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. 10 ಎಕರೆ ಇದ್ದರೆ ರೈತರ ಖಾತೆಗೆ 1 ಲಕ್ಷ ರೂ ಪಾವತಿ.
-
ದಿನ್ 24 ಗಂಟೆ ರೈತರ ಪಂಪಸೆಟ್ ಗೆ ವಿದ್ಯುತ್ ಪೂರೈಕೆ.
-
ಮನೆಯಿಲ್ಲದ ಕುಟುಂಬಕ್ಕೆ ಮನೆಕಟ್ಟಿ ಕೊಡಲಾಗುವುದು.
-
65 ವರ್ಷ ಮೇಲ್ಪಟ್ಟವರಿಗೆ 5 ಸಾವಿರ ರೂಪಾಯಿ ಮಾಸಾಶನ.
-
ವಿಧವೆಯರಿಗೆ 2500 ರೂಪಾಯಿ ಮಾಸಾಶನ ನೀಡಲಾಗುವುದು.