ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಉಗ್ರರು ಪೈಶಾಚಿಕತೆ ಮೆರೆದಿದ್ದಾರೆ. ಪಾಕಿಸ್ಥಾನದ ಪೇಶಾವರದ ಮಸೀದಿಯಲ್ಲಿ ಉಗ್ರರು ಸೋಮವಾರ ಬಾಂಬ್ ಸ್ಫೋಟಿಸಿದ್ದು, ವಿಧ್ವಂಸದಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ.
ಪೇಶಾವರದಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಈ ಸ್ಫೋಟ ಘಟನೆ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಮಸೀದಿಯ ಒಂದು ಭಾಗ ಛಿದ್ರಗೊಂಡಿದೆ.
ಸ್ಥಳೀಯ ಪೊಲೀಸರ ಪ್ರಕಾರ ಸುಮಾರು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.