ಹಾವೇರಿ: “ಬೆಳಗಾವಿ ನಮ್ಮದು. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕ್ಯಾತೆ ತೆಗೆದು ಬಂದವರ ಖಾತೆಗಳೇ ಇಲ್ಲವಾಗಿಸಬಲ್ಲರು ಕನ್ನಡಿಗರು”. ಇದು 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಸಿಡಿಲ ನುಡಿಗಳು.
ಹಾವೇರಿಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ತಮ್ಮ ಅಧ್ಯಕ್ಷತೆಯ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಡಾ. ದೊಡ್ಡರಂಗೇಗೌಡರು, ಕನ್ನಡ -ಮಹಾರಾಷ್ಟ್ರ ಗಡಿ ಸಮಸ್ಯೆಯಡಿ ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಬಸ್ಗಳನ್ನು ಸುಡುವುದು, ಧ್ವಜಗಳನ್ನು ಸುಡುವುದು ಇಂತಹ ಅಹಿತಕರ ಘಟನೆಗಳು ನಡೆಯುವುದು ಸರ್ವತಾ ಸಾಧುವಲ್ಲ. ಒಬ್ಬ ಲೇಖಕನಾಗಿ, ಬರಹಗಾರನಾಗಿ ನಾನು ಹೇಳುವುದು, ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕ್ಯಾತೆ ತೆಗೆದು ಬಂದವರ ಖಾತೆಗಳೇ ಇಲ್ಲವಾಗಿಸಬಲ್ಲರು ಕನ್ನಡಿಗರು. ನಾಡಿಗೆ ಅವಮಾನವಾದರೆ ನಮಗೆ ಅವಮಾನ. ನುಡಿಗೆ ಅವಮಾನವಾದರೆ ಕೆರಳುತ್ತದೆ. ನಮ್ಮಭಿಮಾನ ನಾಡು ನುಡಿಗೆ ಅನ್ಯಾಯವಾಗಲು ನಾವು ಕನ್ನಡಿಗರು ಬಿಡುವುದಿಲ್ಲ. ನಮ್ಮಲ್ಲಿ ಅದಟು ಇದೆ; ಪರಾಕ್ರಮವೂ ಇದೆ. ಎದುರಿಸುವ ಕೆಚ್ಚೂ ನೆಚ್ಚೂ ಆತ್ಮವಿಶ್ವಾಸ ಇದ್ದೇ ಇದೆ. ಬೆಳಗಾವಿಯನ್ನು ನಾವು ಕನ್ನಡಿಗರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಇಚ್ಛೆ ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮದಲ್ಲದ ನೆಲವನ್ನು ನಾವು ಅಪೇಕ್ಷಿಸುವುದೂ ಇಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರ್ಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು! ಇದು ಪ್ರತಿ ನಿತ್ಯದ ಮಾತು! ಎಂಬುದನ್ನು ಖಂಡತುಂಡವಾಗಿ ಡಾ. ದೊಡ್ಡರಂಗೇಗೌಡರು ತಮ್ಮ ಭಾಷಣದಲ್ಲಿ ಹೇಳಿದರು.
ಪದೇ ಪದೇ ಬೆಳಗಾವಿ ನಮ್ಮದು ಎಂದು ಹೇಳಿಕೊಂಡು ಬರುವ ಹೊರರಾಜ್ಯದವರು ಒಮ್ಮೆ ಮಹಾಜನ್ ವರದಿಯನ್ನು ಓದಿ ನೋಡಲಿ, ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬುದನ್ನು ಈಗಾಗಲೆ ನಮ್ಮ ರಾಜ್ಯ ಸರ್ಕಾರ ಹಲವು ಭಾರಿ ಹೇಳಿದೆ. ಕಾಸರಗೋಡಿನಲ್ಲಿ ಕನ್ನಡ ಕಲೆ, ಸಂಸ್ಕೃತಿ, ಭಾμÉಯ ಉಳಿವಿಗೆ ತೀವ್ರವಾದ ಗಮನವನ್ನು ಕೊಡಬೇಕಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸವಾಗಬೇಕು. ಅಲ್ಲೀಗ ಮಲೆಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದ ವಿಪರ್ಯಾಸದ ಪರಿಸ್ಥಿತಿ ಅಲ್ಲಿದೆ. ಇತ್ತ ಕಡೆ ನಮ್ಮ ಸರ್ಕಾರ ಆದ್ಯ ಗಮನ ನೀಡಬೇಕಿದೆ. ಮಹಾಜನ ವರದಿ ರೂಪಿತವಾದ ಕಾಲಕ್ಕೆ ಮದರಾಸು ಆಡಳಿತದಲ್ಲಿದ್ದ ದಕ್ಷಿಣ ಕನ್ನಡ ಪ್ರದೇಶವನ್ನು ಮೈಸೂರಿನೊಂದಿಗೆ ಸೇರಿಸುವ ವೇಳೆ, ಕಾಸರಗೋಡು ಪ್ರದೇಶವನ್ನು ಕೈಬಿಡಲಾಯಿತು. ಆ ಕಾರಣ ಉದ್ಭವವಾದ ಸಮಸ್ಯೆ ಇದಾಗಿದೆ. ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಸಾವಿರಾರು ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿದ್ದು, ಶೈಕ್ಷಣಿಕ ಬದುಕಿಗೆ ಅಪ್ಪಳಿಸಿದ ಸುನಾಮಿಯೇ ಸರಿ. ನಾನು ಓದಿದ ಶಾಲೆಯಲ್ಲಿಯೂ ಕೂಡ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಮುಚ್ಚುವ ನಿರ್ಧಾರ ಮಾಡಿದಾಗ, ನಿಜವಾಗಿಯೂ ನಾನು ಕಣ್ಣೀರು ಹಾಕಿದ್ದೇನೆ. ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಸಂಸದರು, ಶಾಸಕರುಗಳು ಕಡಿಮೆ ಎಂದರೆ ತಲಾ 03 ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.
ನಗರಗಳು, ಗ್ರಾಮಗಳು ಎನ್ನುವ ಭೇದವಿಲ್ಲದೆ ನಮ್ಮನ್ನು ಆವರಿಸಿರುವ ಇಂಗ್ಲಿμï ಮಾಧ್ಯಮ ಶಿಕ್ಷಣದ ಹಿಂದಿನ ಹಂಬಲವೂ ಇದೇ ಅಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಕನ್ನಡ ಅಥವಾ ಭಾರತೀಯ ಭಾμÉಗಳು ಮಾತ್ರವೇ ಅಲ್ಲ, ಜಾಗತಿಕವಾಗಿ ಎಲ್ಲ ಅಭಿವೃದ್ಧಿಶೀಲದೇಶಗಳಲ್ಲಿಯೂ ‘ಅನ್ನದ ಭಾμÉ’ಯಾಗಿ ಅನ್ಯ ಭಾμÉಯೊಂದಕ್ಕೆ ಮುಖ ಮಾಡಿರುವ ವಾಸ್ತವ ನಮ್ಮ ಮುಂದೆ ಕಂಡುಬರುತ್ತದೆ. ಇಪ್ಪತ್ತೊಂದನೆಯ ಶತಮಾನದ, ಎರಡನೆಯ ದಶಕದಲ್ಲಿ ನಿಂತು ಕನ್ನಡದ ನನ್ನ ಬಂಧುಬಾಂಧವರನ್ನು ಉದ್ದೇಶಿಸುವಾಗ ನನಗೆ ಇಂದಿನ ಕಟುವಾಸ್ತವಗಳಿಗೆ ಬೆನ್ನು ಹಾಕುವ ಮನಸ್ಸಿಲ್ಲ. ಏಳೂವರೆದಶಕವನ್ನು ಮೀರಿದ ನನ್ನ ಬದುಕಿನ ಅನುಭವಕ್ಕೆ ಇಪ್ಪತ್ತು-ಮೂವತ್ತರ ವಯೋಮಾನದ ಇಂದಿನ ಯುವಕ-ಯುವತಿಯರತಲ್ಲಣಗಳಅರಿವಿಲ್ಲದೇಹೋದೀತೇ? ನನ್ನ ಮಕ್ಕಳು, ಮೊಮ್ಮಕ್ಕಳು, ಅವರನ್ನೂ ಮೀರಿದ ಸಾವಿರಾರು ಸಂಖ್ಯೆಯ ಹಿರಿ, ಕಿರಿಯ ವಿದ್ಯಾರ್ಥಿಗಳ ತಲ್ಲಣಗಳಿಗೆ ಮುಖಾಮುಖಿ ಯಾಗುತ್ತಲೇ ಬಂದವನು ನಾನು. ಹಾಗಾಗಿಯೇ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿರುವ, ಜಗತ್ತಿನ ಶ್ರೇಷ್ಠ ಸಂಸ್ಕೃತಿ, ಚಿಂತನೆಯನ್ನು ಪೆÇರೆದಿರುವ ಈ ನನ್ನ ಭಾμÉ ಕನ್ನಡ ಮುಂದಿನ ದಿನಗಳಲ್ಲಿಯೂ ತನ್ನ ಪಾರಮ್ಯವನ್ನು ಮೆರೆಯಬೇಕೆಂದರೆ ಅದು ಮನೆ, ಮನದ ಭಾμÉಯಾಗಿ ಉಳಿಯಬೇಕು. ಜೊತೆಗೆ ಕನ್ನಡಿಗರ ಭವ್ಯ ಭವಿತವ್ಯದಭಾಷೆಯೂ ಆಗಬೇಕು. ಕನ್ನಡಿಗರಿಗೆ ಅನ್ನವಿಕ್ಕುವ ಭಾಷೆಯಾಗಿ, ಕರುನಾಡಿನ ಭವಿತವ್ಯವನ್ನು ಮುನ್ನಡೆಸುವ ಕಹಳೆಯಾಗಿ ಕಂಗೊಳಿಸಬೇಕು. ಈಗಿನ ಪೀಳಿಗೆ ಆಂಗ್ಲ ವ್ಯಾಮೋಹಿಗಳೇಕೆ ಆಗುತ್ತಾರೆಯೋ ತಿಳಿದಿಲ್ಲ. ಆದರೆ ಆಂಗ್ಲ ಭಾಷೆಯನ್ನು ಕಲಿಯಬೇಡಿ ಎಂದು ನಾನು ಎಂದೂ ಹೇಳಿಲ್ಲ. ರೆವರೆಂಡ್ ಎಫ್ ಕಿಟಲ್ ಅವರು ಅನ್ಯಭಾಷಿಗರಾದರೂ ಕನ್ನಡದಲ್ಲಿ ನಿಘಂಟನ್ನು ರಚಿಸಿ, ಈ ನಾಡಿಗೆ ದುಡಿದ ಶ್ರೇಷ್ಠರೆನಿಸಿದರು. ನಮ್ಮ ಜನತೆ, ಬಹುಮುಖ್ಯವಾಗಿ ನಮ್ಮ ಯುವಪೀಳಿಗೆ ತಮ್ಮ ಜೀವನದಲ್ಲಿ ಒಂದಕ್ಷರವನ್ನೂ ಕೇಳಿರದ ಒಂದು ಭಾಷೆಯಲ್ಲಿ ಅದು ಜರ್ಮನ್, ಜಪಾನೀಸ್, ಫ್ರೆಂಚ್, ಸ್ಪ್ಯಾನಿಷ್, ರಷಿಯನ್, ಮ್ಯಾಂಡರೀನ್ ಮುಂತಾದ ಯಾವುದೇ ಆಗಿರಲಿ, ಆ ಭಾμÉಗಳನ್ನಾಡುವ ದೇಶಗಳಿಗೆ ಶಿಕ್ಷಣಕ್ಕೆಂದು ತೆರಳಿದಾಗ ಅಲ್ಪ ಅವಧಿಯಲ್ಲಿಯೇ ಆ ಭಾμÉಗಳನ್ನು ಅರೆಬರೆಯಾಗಿ ಕಲಿತು, ಆ ಭಾμÉಗಳ ಶಿಕ್ಷಣ ಮಾಧ್ಯಮದಲ್ಲಿಯೇ ವೈದ್ಯಕೀಯ ಶಿಕ್ಷಣವನ್ನೂ, ಇಂಜಿನಿಯರಿಂಗ್ ಶಿಕ್ಷಣವನ್ನೋ ಅಥವಾ ಮತ್ತಾವುದೋ ಉನ್ನತ ಶಿಕ್ಷಣ, ಪದವಿಗಳನ್ನೋ ನಿರಾಯಾಸವಾಗಿ ಪಡೆಯುತ್ತಾರೆ. ಹೀಗೆ ಆ ಭಾμÉಗಳನ್ನೇ ತಿಳಿಯದ ಇಲ್ಲಿಂದ ಹೋದವರು ವರ್ಷಗಟ್ಟಲೆ ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಆ ಭಾμÉಗಳಲ್ಲಿ ಪ್ರಬಂಧಗಳನ್ನುಮಂಡಿಸಿದವರಿದ್ದಾರೆ. ಹೀಗಿರುವಾಗ ಹುಟ್ಟಿನಿಂದ ತಾವು ಆಡಿರುವ, ನಲಿದಾಡಿರುವ ತಮ್ಮದೇ ಭಾμÉಯಲ್ಲಿ ವೈದ್ಯಕೀಯ, ತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳನ್ನಾಗಲಿ, ವಿವಿಧ ಉನ್ನತ ಶಿಕ್ಷಣಗಳನ್ನಾಗಲಿ ತಮ್ಮದೇ ಭಾಷೆಯಲ್ಲಿ ಪಡೆಯುವ ಸಾಧ್ಯತೆ ಇದ್ದರೆ ಅವರು ಅದನ್ನು ನಿರಾಕರಿಸುವರೇ ಎಂದು ಪ್ರಶ್ನಿಸಿದ ಅವರು, ಕನ್ನಡ ಭಾಷೆಯಲ್ಲಿಯೇ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವನ್ನು ಕಲಿಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ತಾಯಿಗೆ ಹರಕಲು ತೇಪೆ ಹಾಕಿದ ಸೀರೆ ಉಡಿಸಿ, ಅನ್ಯ ತಾಯಿಗೆ ಪೀತಾಂಬರ ಸೀರೆಯುಡಿಸಿ ಅಲಂಕಾರ ಮಾಡಿ ಮೆರೆಸುತ್ತೇವೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ದೊರೆತಿರುವ ಶಾಸ್ತ್ರೀಯ ಸ್ಥಾನಮಾನವನ್ನು ಉಳಿಸಿಸಿ ಬೆಳೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಹೋರಾಟಕ್ಕೆ ನಾವು ಸದಾ ಸಿದ್ಧರಿರುತ್ತೇವೆ. ಅಗತ್ಯ ಬಿದ್ದಲ್ಲಿ ದೆಹಲಿಗೆ ಆಯೋಗವನ್ನು ಕೊಂಡೊಯ್ಯೋಣ ಎಂದರು. ಗಡಿನಾಡಿನ ಸಮಸ್ಯೆಗಳು ಬಹಳಷ್ಟಿವೆ. ಇವುಗಳನ್ನು ಪರಿಹರಿಸುವ ಕಾರ್ಯ ಆಗಬೇಇದೆ. ಪ್ರಕಾಶಕರು, ಲೇಖಕರ ಸಂಬಂಧವನ್ನು ನಾವು ಗಟ್ಟಿಗೊಳಿಸಬೇಕಿದೆ. ಸರ್ಕಾರದಿಂದ ನಮ್ಮ ರಾಜ್ಯದಲ್ಲಿ ಲೇಖಕರ ಗರಿಷ್ಟ 300 ಕೃತಿಗಳನ್ನು ಸರ್ಕಾರದಿಂದ ಕೊಳ್ಳಲು ಅವಕಾಶವಿದೆ, ಆದರೆ ನೆರೆಯ ತಮಿಳುನಾಡಿನಲ್ಲಿ ಗರಿಷ್ಠ 500, ಕೇರಳದಲ್ಲಿ 1000 ಪ್ರತಿವರೆಗೂ ಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ ಎಂದರು.
ಕನ್ನಡ ಭಾಷೆ, ನಾಡು, ನುಡಿಗಾಗಿ ಹೋರಾಡಿದ ಹೋರಾಟಗಾರರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕುವಿರಿ, ಮೊದಲು ಅಂತಹವರನ್ನು ಬಿಡುಗಡೆ ಮಾಡಿ, ಅವರ ಮೇಲಿನ ಕೇಸುಗಳನ್ನು ವಜಾ ಮಾಡಿ ಎಂದು ಆಗ್ರಹಿಸಿದ ಅವರು, ಕನ್ನಡ ಹೋರಾಟಗಾರರೇನು ಉಗ್ರಗಾಮಿಗಳಲ್ಲ, ಈ ನೆಲಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ತಾಯಿ ಭುವನೇಶ್ವರಿ ದೇವಿಗಾಗಿ ದುಡಿಯುವವರಾಗಿದ್ದಾರೆ ಎಂದ ಅವರು, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ನಮ್ಮ ವಚನಗಳನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿದಾಗ, ಇಡೀ ಜಗತ್ತಿನಲ್ಲೇ ಸಂಚಲನ ಸೃಷ್ಟಿಯಾಯಿತು. 12 ನೇ ಶತಮಾನದಲ್ಲಿಯೇ ಭಾರತದ ಸಾಹಿತ್ಯದಲ್ಲಿ ಇಂತಹ ಕ್ರಾಂತಿಯಾಗಿದೆಯಲ್ಲ ಎಂದು ಜಗತ್ತೇ ಮೂಗಿನ ಮೇಲೆ ಬೆರಳಿಟ್ಟು ನೋಡುವಂತಾಯಿತು. ಹೀಗಾಗಿ ನಾವು ನಮ್ಮ ಕನ್ನಡ ಧ್ವಜವನ್ನು ವಿಶ್ವ ಮಟ್ಟದಲ್ಲಿ ಏರಿಸುವಂತಾಗಬೇಕು, ನಮ್ಮ ಕನ್ನಡ ಈಗ ವಿಶ್ವಮುಖಿಯಾಗಿದೆ. ಹೀಗಾಗಿ ಕನ್ನಡ ಭಾಷೆ ಸೂರ್ಯ-ಚಂದ್ರ, ಭೂಮಿ-ಬಾನು ಇರುವವರೆಗೂ ಶಾಶ್ವತ ಎಂದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕನ್ನಡ ಮತ್ತು ಸಂಸ್ಕøತಿ ಹಾಗೂ ಇಂಧನ ಖಾತೆ ಸಚಿವ ವಿ.ಸುನೀಲಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರುಣ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಸಲೀಂ ಅಹ್ಮದ್, ಆರ್.ಶಂಕರ್, ಪ್ರದೀಪ ಶೆಟ್ಟರ್, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಾಕರಸಾಸಂ ಉಪಾಧ್ಯಕ್ಷ ಬಸವರಾಜ ಕೆಲಗಾರ, ಮಾಜಿ ಸಚಿವರಾದ ಬಸವರಾಜ ಶಿವಣ್ಣವರ, ಮನೋಹರ ತಹಸೀಲ್ದಾರ, ರುದ್ರಪ್ಪ ಲಮಾಣಿ, ನಿಕಟಪೂರ್ವ ಕಸಾಪ ರಾಜಾಧ್ಯಕ್ಷ ಮನು ಬಳಿಗಾರ ಮತ್ತಿತರರು ವೇದಿಕೆಯಲ್ಲಿದ್ದರು.