ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ದೇಶದಲ್ಲೇ ಅತ್ಯುತ್ತಮ ಸೇವೆಗೆ ಹೆಸರಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ ಇದೀಗ ಪುಂಡರ ವಿಷಯದಲ್ಲಿ ಅಸಮರ್ಥವಾಗಿದೆಯೇ ಎಂಬುದಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಬೇಕಿದೆ. ಅಥವಾ ರೌಡಿ ಚಟುವಟಿಕೆ ನಿಯಂತ್ರಿಸಲು ಅಡ್ಡಿಯಾಗಿದ್ದರೆ ಅಂತಹಾ ವಿಚಾರಗಳನ್ನು ಡಿಜಿಪಿ ಪ್ರವೀಣ್ ಸೂಧ್ ಅವರು ಬಹಿರಂಗಪಡಿಸಬೇಕಿದೆ.
ಕುಂದನಹಳ್ಳಿ ಗೇಟ್ ಬಳಿ ಅಂಗಡಿಯೊಂದಕ್ಕೆ ನುಗ್ಗಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆಂಬ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ಕುಂದನಹಳ್ಳಿ ಗೇಟ್ HAL ಸಮೀಪ ಬೇಕರಿಯಲ್ಲಿ ನಿನ್ನೆ ನಡೆದ ಘಟನೆ ಪುಡಿ ರೌಡಿಗಳಿಂದ ಅಮಾಯಕ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ ,, ಇಂತಹ ಘಟನೆಗಳು ಬೆಂಗಳೂರಿನಲ್ಲಿ ದಿನೇ ದಿನೇ ಜಾಸ್ತಿ ಆಗುತ್ತಿದ್ದು…. ಪುಡಿ ರೌಡಿಗಳ ದರ್ಪವನ್ನು ಇಳಿಸಲು,, ಸಹಾಯ ಹಸ್ತ ಚಾಚುತ್ತಿರುವ ಬೈಂದೂರಿನ ಹುಡುಗರು @BlrCityPolice pic.twitter.com/YgyJaq5p2t
— Kuldeep Somayaji P. (@kuldeepcet) December 9, 2022
ಈ ವೀಡಿಯೋ ಬಗ್ಗೆ ನೆಟ್ಟಿಗರು ಪೊಲೀಸ್ ಇಲಾಖೆ ಬಗ್ಗೆ ನಂಬಿಕೆ ಕಳೆದುಕೊಂಡಂತೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ ಈ ಘಟನೆಯು ‘ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿ..’ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ನಾಯಕಿ ಲಾವಣ್ಯ ಬಲ್ಲಾಳ್ ಅವರು ಬೊಮ್ಮಾಯಿ ಸರ್ಕಾರವನ್ನು ಕುಟುಕಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದನ್ನು ಅವರು ತಮ್ಮದ ಪದಗಳಲ್ಲಿ ವಿಶ್ಲೇಷಿಸಿದ್ದಾರೆ.
UP model in Karnataka!
Law and order is a joke in the state @JnanendraAraga . https://t.co/lzEW50MtGs— Lavanya Ballal Jain (@LavanyaBallal) December 9, 2022
ಈ ನಡುವೆ, ಬೆಂಗಳೂರಿನ ಹೆಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯ ಕುಂದನಹಳ್ಳಿ ಗೇಟ್ ಬಳಿಯ ಈ ಘಟನೆಯಲ್ಲಿ ದಾಳಿಗೊಳಗಾದ ಯುವಕರು ಉಡುಪಿ ಜಿಲ್ಲೆ ಬೈಂದೂರು ಮೂಲದವರೆನ್ಬಲಾಗಿದೆ. ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಬೆಂಗಳೂರಿನಲ್ಲಿ ಬೈಂದೂರಿನ ಹುಡುಗರ ಮೇಲೆ ಹಲ್ಲೆ ನಡೆಸಿದವರಿಗೆ ಕಠಿಣ ಶಿಕ್ಷೆ ಕೊಡಿಸಿಯೇ ಸಿದ್ದ ಎಂದಿದ್ದಾರೆ.
Danyavaad @BMSByndoorMLA and @HMOKarnataka for quick action
I'm sure these goons will learn the lesson of their life time
It's not Sidda's Tugalak Raj pic.twitter.com/kRJsC2zQe9— Mahesh ThuppeKallu (Modiji's Parivaar) (@MaheshThuppeKal) December 9, 2022























































